ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕಮಲಾಕ್ಷಿ ಕಾಂಪ್ಲೆಕ್ಸ್ ನ ಉದ್ಘಾಟನಾ ಸಮಾರಂಭ ನಡೆಯಿತು.
ಮಾಣಿಲ ಶ್ರೀ ಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪಪ್ರಜ್ವಲಿಸಿ ಆಶೀರ್ವಚನ ನೀಡಿ
ಕಮಲಾಕ್ಷಿ ಕಾಂಪ್ಲೆಕ್ಸ್ ಆದರ್ಶ ಕಟ್ಟಡ. ಪಣೋಲಿಬೈಲು ಕ್ಷೇತ್ರದಲ್ಲಿ ಇಂತಹ ಕಟ್ಟಡ ನಿರ್ಮಾಣವಾಗಿರುವುದು ಮಾಲಕರ ಅತೀ ದೊಡ್ಡ ಯೋಗ ಎಂದರು. ಯಾರೇ ಅಭಿವೃದ್ಧಿ ಕೆಲಸ ಮಾಡಿದರೂ ಮತ್ಸರ ಬಿಟ್ಟು ಎಲ್ಲರೂ ನಮ್ಮವರೆಂದು ತಿಳಿದು ಸಹಕಾರ ನೀಡಬೇಕು ಎಂದು ತಿಳಿಸಿದರು.
ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮಾತನಾಡಿ ಹಿಂದುಳಿದ ವರ್ಗದಲ್ಲಿ ಹುಟ್ಟಿ ಕಟ್ಟಡ ನಿರ್ಮಿಸುವಂತಹ ಸಾಧನೆ ಮಾಡಲು ಹಿರಿಯರ ಆಶೀರ್ವಾದದಿಂದ ಸಾಧ್ಯವಾಗಿದೆ. ಪಣೋಲಿಬೈಲು ಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣಗೊಂಡಿರುವುದರಿಂದ ಊರಿನ ಅಭಿವೃದಿಯ ಜೊತೆಗೆ ಈ ದೈವಸ್ಥಾನಕ್ಕೆ ಬರುವ ಭಕ್ತರಿಗೂ ಅನುಕೂಲವಾಗಲಿದೆ ಎಂದರು.
ಅರ್ಚಕ ಶಿವಾನಂದ ಐತಾಳ್, ಸಜೀಪಮೂಡ ಗ್ರಾ.ಪಂ.ಮಾಜಿ ದೇವಿ ಪ್ರಸಾದ್ ಪೂಂಜಅರ್ಚಕ ಶಿವಾನಂದ ಐತಾಳ್, ಸಜೀಪಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಸಜೀಪ ಮಾಗಣೆ ಗಡಿ ಪ್ರಧಾನರಾದ ಕೋಚು ಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ, ಪ್ರಮುಖರಾದ ಕುಡುವ ಪಾಲು ಮೋಹನದಾಸ ಹೆಗ್ಡೆ, ಚಂದ್ರಶೇಖರ ನೀಲ್ಯ, ರಹಿಮಂಡ್ ಅಂದ್ರಾದೆ, ಪುರುಷೋತ್ತಮ, ನವೀನ್ ಕುಮಾರ್ ಭಂಡಾರದ ಮನೆ
ಯಾದವ ಕಂಚಿಲ, ನಗ್ರಿ ಶ್ರೀನಿವಾಸ ಭಟ್, ರಮೇಶ್ ಎಂ. ಭಂಡಾರದ ಮನೆ, ರಮೇಶ್ ಕುಲಾಲ್ ಪಣೋಲಿಬೈಲು.ವಿಶ್ವನಾಥ ಬೆಳ್ಚಾಡ ಕಟ್ಟಡದ ಮಾಲಕರಾದ ಗಿರೀಶ್ ಬಂಗೇರ ಹಾಗೂ ಸುರೇಖ ದಂಪತಿ ಉಪಸ್ಥಿತರಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಭೇಟಿ ನೀಡಿ ಶುಭ ಹಾರೈಸಿದರು. ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.