ಇಲ್ಲಿನ ಆಹಾರ ಇಲಾಖೆಯಲ್ಲಿ ಜೂ. 28ರಂದು ಸರ್ವರ್ ನಿರ್ವಹಣಾ ಕಾರ್ಯ ನಡೆಯಲಿದೆ. ಆದುದರಿಂದ ಅರ್ಹ ಪಡಿತರ ಚೀಟಿದಾರರು ಈ ತಿಂಗಳ ಪಡಿತರ ಸಾಮಾಗ್ರಿಗಳನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಜೂ. 27ರೊಳಗೆ ಪಡೆದುಕೊಳ್ಳಬೇಕು. ಆ ಬಳಿಕ ಪಡಿತರ ಸಾಮಾಗ್ರಿ ಪಡೆದುಕೊಳ್ಳಲು ಅವಕಾಶ ಇಲ್ಲ ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.