ಮಂಗಳೂರು: ಇಲ್ಲಿನ ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 2023-24 ನೇ ಸಾಲಿಗೆ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಯಿತು.
Advertisement
Advertisement
Advertisement
ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಬಹುಮತದಿಂದ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ವಿಲ್ಮಾ ಮೊಂತೆರೊ ದೆರೆಬೈಲ್, ಉಪಾಧ್ಯಕ್ಷರಾಗಿ ನೊರ್ಬರ್ಟ್ ಮಿಸ್ಕಿತ್ ಸುರತ್ಕಲ್ ಮತ್ತು ಲೋರೆನ್ಸ್ ಡಿಸೋಜ ಸುರತ್ಕಲ್, ಸಹ ಕಾರ್ಯದರ್ಶಿಯಾಗಿ ರೋಷನ್ ಬೊನಿಫಾಸ್ ಮಾರ್ಟಿಸ್ ಸೂರಿಕುಮೇರು, ಖಜಾಂಚಿಯಾಗಿ ಫ್ರಾನ್ಸಿಸ್ ಮೊಂತೆರೊ ತಲಪಾಡಿ, ಸಹ ಖಜಾಂಚಿಯಾಗಿ ಸಂತೋಷ್ ಡಿಸೋಜ ಬಜ್ಪೆ, ನಿಕಟ ಪೂರ್ವ ಅಧ್ಯಕ್ಷರಾಗಿ ಸ್ಟ್ಯಾನಿ ಲೋಬೊ ಹಾಗೂ ಆಧ್ಯಾತ್ಮಿಕ ನಿರ್ದೇಶಕರಾಗಿ ಅತೀ ವಂದನೀಯ ಜೆ.ಬಿ.ಸಲ್ಡಾನ್ಹಾರವರು ಆಯ್ಕೆಯಾಗಿರುತ್ತಾರೆ. ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷರಾದ ರೊಲ್ಫಿ ಡಿಕೋಸ್ತರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
Advertisement