ಬಂಟ್ವಾಳ: ಅಭಿವೃದ್ಧಿ ಎಂಬುದು ನಿಂತನೀರಲ್ಲ, ಹರಿಯುವ ನೀರು, ಅಭಿವೃದ್ಧಿ ಜೊತೆಗೆ ಸಂಸ್ಕೃತಿ ,ರಾಷ್ಟ್ರೀಯತೆಯನ್ನು ಉಳಿಸಿ, ಕ್ಷೇತ್ರದ ಪ್ರತಿಯೊಂದು ಮತದಾರರು , ಕಾರ್ಯಕರ್ತರು ಗೌರವದಿಂದ ಬದುಕಬೇಕಾದರೆ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು ಎಂದು ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಸರಪಾಡಿ ಗ್ರಾಮದ ಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ, ಪ್ರಮುಖ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಕೃಷಿ ಮತ್ತು ಋಷಿ ಸಂಸ್ಕೃತಿ ಉಳಿಯಬೇಕಾಗಿದೆ.
ನಯಪೈಸೆ ಖರ್ಚು ಇಲ್ಲದ ಗ್ಯಾರಂಟಿ ಕಾರ್ಡ್ ಉಪಯೋಗಕ್ಕೆ ಬಾರದ ಡಮ್ಮಿ ಕಾರ್ಡ್ ಇದಾಗಿದ್ದು, ಸುಳ್ಳು ಭರವಸೆ ಮೂಲಕ ಗೆಲ್ಲುವ ಯೋಚನೆಯಲ್ಲಿದೆ, ಬಂಟ್ವಾಳ ಕ್ಷೇತ್ರದ ಜನ ಬುದ್ಧಿವಂತರಾಗಿದ್ದು, ಕಾಂಗ್ರೆಸ್ ನ ಪೊಳ್ಳು ಭರವೆಸೆಗಳಿಗೆ ಮರುಳಾಗುವುದಿಲ್ಲ,ಕಾಂಗ್ರೆಸ್ ಗೆ ಅವಕಾಶ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಜನತೆ ನೀಡಿದ ಒಂದು ಮತದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ಕಾಶ್ಮೀರದಲ್ಲಿ ಆರ್ಟಿಕಲ್ಸ್ 370 ರದ್ದು ಮಾಡಲು ಸಾಧ್ಯವಾಯಿತು ಎಂಬುದನ್ನು ನಾವು ಖುಷಿಪಡಬೇಕಾಗಿದೆ ಎಂದು ಅವರು ತಿಳಿಸಿದರು.
ಮೂರು ಬಾರಿ ಪಾದಯಾತ್ರೆ ಮೂಲಕ ನಿಮ್ಮ ಮನೆಬಾಗಿಲಿಗೆ ಬಂದಿದ್ದೇನೆ, ಶಾಸಕನಾದ ಮೇಲೆ ಅಭಿವೃದ್ಧಿ ಕಾರ್ಯಗಳ ಜೊತೆ ಪಾದಯಾತ್ರೆಯಲ್ಲಿ ನಿಮ್ಮ ಬಳಿಗೆ ಬಂದಿದ್ದೇನೆ. ಮುಂದೆಯೂ ಎಂದೆಂದಿಗೂ ನಿಮ್ಮ ಮನೆಯ ಮಗನಾಗಿ ಜೊತೆ ಇರುತ್ತೇನೆ ಎಂದ ಅವರು ಈ ಬಾರಿಯ ಹಿರಿಯರು ಹಾಗೂ ಪಕ್ಷ ಸ್ಪರ್ಧೆ ಮಾಡಬೇಕು ಎಂದು ಟಿಕೆಟ್ ನೀಡಿದಾಗ,ಗ್ರಾಮಗ್ರಾಮಗಳಿಗೆ ತೆರಳಿ ಹಿರಿಯರ ಆಶೀರ್ವಾದ ಪಡೆದು ಬಳಿಕ ನಾಮಪತ್ರ ಸಲ್ಲಿಸಿದ್ದೇನೆ. ಇದೀಗ ನನಗೆ ಮತ ನೀಡಿ ಗೆಲ್ಲಿಸಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಮಾತನಾಡಿ, ಬಂಟ್ವಾಳದಲ್ಲಿ ನುಡಿದಂತೆ ನಡೆದ ಶಾಸಕರಿದ್ದರೆ ರಾಜೇಶ್ ನಾಯ್ಕ್ ಒಬ್ಬರೇ, ರಾಜ ಧರ್ಮಕ್ಕೆ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಅವರು ಮತ್ತೊಮ್ಮೆ ಬಂಟ್ವಾಳ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಬೇಕು ಎಂದು ಅವರು ತಿಳಿಸಿದರು.
ಕಳೆದ ಅವಧಿಯಲ್ಲಿ 100 ಕೋಟಿ ಅನುದಾನ ಎಂದು ಜಾಹೀರಾತು ಹಾಕಿಕೊಂಡಿದ್ದ ಕಾಂಗ್ರೆಸ್ ಈ ಬಾರಿ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರ ಅಭಿವೃದ್ಧಿ ತಡೆಯಲಾರದೆ 2 ಸಾವಿರ ಕ್ಕಿಂತಲೂ ಅಧಿಕ ಅನುದಾನಗಳ ಮೂಲಕ ಅಭಿವೃದ್ಧಿ ಮಾಡಿದನ್ನು ಸಹಿಸಲಾರದೆ 5 ಸಾವಿರ ಕೋಟಿ ಎಂದು ಸುಳ್ಳು ಹೇಳಿ ಜನರಿಂದ ಉಗಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ವ್ಯಂಗ್ಯ ವಾಡಿದರು.
ಸರಪಾಡಿ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಪೂಜಾರಿ, ಸರಪಾಡಿ ಗ್ರಾಮಪಂಚಾಯತ್ ಸದಸ್ಯರಾದ ಧನಂಜಯ ಶೆಟ್ಟಿ,ಸೌಮ್ಯಲತಾ, ದಿನೇಶ್ ಗೌಡ, ಬೂತ್ ಆದ್ಯಕ್ಷ ವಿಕ್ರಮ್ , ಪ್ರಮುಖರಾದ ಹಿಮಕರ ಪೂಜಾರಿ, ಕೃಷ್ಣಶಾಂತಿ, ಡೀಕಯ್ಯ, ಮಮತಾ, ವಿನೋದ್, ಸಂದೀಪ್ ಎಕ್ಡೇಲ್, ರಾಜೇಶ್ ಪೂಜಾರಿ ಎಕ್ಡೇಲ್, ಕೊರಗಪ್ಪ ಗೌಡ ಪಠಣ, ಅನಿಲ್, ಸಂದೀಪ್, ರಾಜೇಶ್ , ರಘ ಶೆಟ್ಟಿ ಪಡ್ಡಾಯೂರು ಗುತ್ತು, ಅಭಿಲಾಷ್ ಶೆಟ್ಟಿ, ದಯಾನಂದ ಶೆಟ್ಟಿ ಮುನ್ನಾಲಾಯಿ, ವಾಸುದೇವ ಪ್ರಭು,ರಾಮನಾಯ್ಕ್ ಕಾರಂಬು,ಉಮಾವತಿ,ಪ್ರಕಾಶ್ ಶೆಟ್ಟಿ, ಪ್ರವೀಣ್ ಕುಂಟಾಲ್ ಪಲ್ಕೆ,ರಾಮಕೃಷ್ಣ ಮಯ್ಯ, ಗಿರಯಪ್ಪ ಪೂಜಾರಿ,ನಾಣ್ಯಪ್ಪ ಪೂಜಾರಿ, ದಿನೇಶ್ ಗೌಡ, ಸಂತೋಷ್ ಕುಮಾರ್, ರಂಜಿತ್ ಪೂಜಾರಿ, ಶಿವಪ್ರಸಾದ್ ಶೆಟ್ಟಿ, ನಿಶಾಂತ್ ಶೆಟ್ಟಿ, ಜಯಾನಂದ ಸಾಲಿಯಾನ್, ಪ್ರವೀಣ್ ಕುಲಾಲ್, ಜಯಶೆಟ್ಟಿ, ಹರೀಶ್ ಪೂಜಾರಿ, ರಾಜೀವ ಪೂಜಾರಿ, ವಿಶ್ವನಾಥ ಗೌಡ ಮತ್ತಿತರರು ಉಪಸ್ಥಿತರಿದ್ದರು.