ಬಂಟ್ವಾಳ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇದ್ದ ಸೌಹಾರ್ದತೆಯ ವಾತವರಣ ಮತ್ತೆ ರಾಜ್ಯದಲ್ಲಿ ಸೃಷ್ಟಿಯಾಗಲಿದೆ, ಯಾರೂ ಉತ್ತಮ ಆಡಳಿತ ನೀಡಿದ್ದಾರೆ, ಯಾರೂ ಪೊಳ್ಳು ಭರವಸೆಗಳನ್ನು ನೀಡಿ ಯಾಮಾರಿಸಿದ್ದಾರೆ ಎನ್ನುವ ತಿಳಿವಳಿಕೆ ಜನರಿಗೆ ಬಂದಿದೆ. ಆದ್ದರಿಂದ ಈ ಭಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯ ಇಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಜನರನ್ನು ಭಾವನಾತ್ಮಕವಾಗಿ ಕುಕೃತ್ಯಕ್ಕೆ ಪ್ರೇರೆಪಿಸುವಂತಹ, ಜನರು ಸಾಮರಾಸ್ಯದಲ್ಲಿ ಬದುಕುವುದಕ್ಕೆ ತೊಡಕಾಗುವಂತಹ ಭಯದ ವಾತವರಣ ಇದೆ. ಭಾರತ ವಿಶ್ವಗುರು ಆಗಬೇಕಾದರೆ ದೇಶದಲ್ಲಿರುವ ಎಲ್ಲಾ ಜನರು ಸಹೋದರತ್ವದಲ್ಲಿ ಬದುಕುವುದು ಅಗತ್ಯ, ಆದರೆ ದೇಶದ ಪ್ರಸ್ತುತ ಪರಿಸ್ಥಿತಿ ತುಂಬಾ ವ್ಯತಿರಿಕ್ತವಾಗಿದೆ ಎಂದರು.
ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಬಡವರಿಗಾಗಿ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡುತ್ತಿದೆ,
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶೇ.೯೫ ಭರವಸೆಗಳು ಈಡೇರಿದೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಪ್ರಥಮ ಕ್ಯಾಬಿನೆಟ್ ಮೀಟಿಂಗಲ್ಲಿಯೇ ಜನರಿಗೆ ನೀಡಿದ ಗ್ಯಾರಂಟಿಗಳಿಗೆ ಅನುಮೋದನೆ ಸಿಗಲಿದೆ ಎಂದರು.
ಪ್ರಸ್ತುತ ಜನರ ಒಲವು ಕಾಂಗ್ರೆಸ್ ಪಕ್ಷದತ್ತ ಇದೆ. ರಮಾನಾಥ ರೈ ಸಚಿವರಾಗಿ ಅನುಭವ ಹೊಂದಿದ ಜನನಾಯಕ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಿ ತೋರಿಸಿದ್ದಾರೆ, ಮುಂದೆಯೂ ಮಾಡಿ ತೋರಿಸುತ್ತಾರೆ, ಅವರು ಈ ಭಾರಿ ಪ್ರಚಂಡ ಬಹುಮತದಲ್ಲಿ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಹಿಂದುಳಿದ ವರ್ಗದವರನ್ನು ಯಾಮಾರಿಸುವ ಕಾರ್ಯ ಮಾಡಿದೆ, ಸುಳ್ಳು ಭರವಸೆಗಳನ್ನು ನೀಡಿದೆ, ಆ ಕಾರಣಕ್ಕಾಗಿ ಅವರಿಗೆ ಕಾಂಗ್ರೆಸ್ ಗ್ಯಾರೆಂಟಿಗಳಲ್ಲಿ ನಂಬಿಕೆಯಿಲ್ಲ.
ಪಠ್ಯ ಪುಸ್ತಕ ಪರಿಷ್ಕೃರಣೆ ವೇಳೆ ಬ್ರಹ್ಮಶ್ರೀ ನಾರಾಯಣ ಗುರು ಸೇರಿದಂತೆ ಅನೇಕ ದಾರ್ಶನಿಕರ ಚಿಂತನೆಗಳನ್ನು ತೆಗೆಯುವ ಕಾರ್ಯ ಆಗಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಇಂತಹ ತಪ್ಪನ್ನು ಪುನಾರವರ್ತಿಸಲು ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಏನು ಮಾಡಿದೆ ಎಂದು ಕೆಲವರು ಪ್ರಶ್ನಿಸುತ್ತಾರೆ, ನಮ್ಮ ಹಿರಿಯರು ಕಲಿತು ಡಾಕ್ಟರ್ ಇಂಜಿನಿಯರ್ ಆಗಿದ್ದು ೨೦೧೮ ರ ಚುನಾವಣೆಯ ಬಳಿಕವೇ? ಎಂದು ಪ್ರಶ್ನಿಸಿದ ಅವರು ಬಿಜೆಪಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ವನ್ನು ಗಣರಾಜ್ಯೋತ್ಸವ ಪರೇಡ್ನಿಂದ ತೆಗೆಯುವ ಕೆಲಸ ಆಗಿದೆ ಆದರೆ ನಾರಾಯಣ ಗುರು ಜಯಂತಿಯನ್ನು ಸರಕಾರಿ ಹಬ್ಬವಾಗಿ ಘೋಷಿಸುವ ಕಾರ್ಯವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸ ಸದಸದ್ಯ ಪಿಯೂಸ್ ಎಲ್. ರೋಡ್ರಿಗಸ್, ಪಕ್ಷದ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಕೆ.ಸಂಜೀವ ಪೂಜಾರಿ, ಜಯಂತಿ ವಿ. ಪೂಜಾರಿ, ಉಮೇಶ್ ಸಪಲ್ಯ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮಾಯಲಪ್ಪ ಸಾಲ್ಯಾನ್, ವಾಸು ಪೂಜಾರಿ, ಉಮೇಶ್ಕುಲಾಲ್ ನಾವೂರು, ಜೋಸ್ಪೀನ್ ಡಿಸೋಜಾ, ರಿಯಾಝ್, ಹುಸೈನ್, ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.