ಬಂಟ್ವಾಳ: ನಮ್ಮ ದೈನಂದಿನ ಆಹಾರ ಪದ್ದತಿ ಸರಿ ಇದ್ದಾಗ, ಆಯಾಯ ಋತುವಿಗೆ ಸರಿಯಾದ ಆಹಾರ ಸೇವನೆ ಮಾಡಿದಾಗ ಸಕಲ ರೋಗದಿಂದ ದೂರವಿರಬಹುದು ಎಂದು ಗೋವಿನತೋಟ ರಾಧಸುರಭಿ ಗೋ ಮಂದಿರದ ಅಧ್ಯಕ್ಷ ಭಕ್ತಿಭೂಷಣ್ ಪ್ರಭುಜಿ ಹೇಳಿದರು.
ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ ಅಮೃತ ಮಹೋತ್ಸವದ ಏಕಹ ಭಜನೆ, ರುದ್ರಯಾಗದ ಪ್ರಯುಕ್ತ ಭಾನುವಾರ ಮಂದಿರದ ಆವರಣದಲ್ಲಿ ನಡೆದ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ವಿವಿ ಉಪನ್ಯಾಸಕಿ ವಿನುತ ಸಾಲೆತ್ತೂರು ಮಾತನಾಡಿ ಸಂಸ್ಕಾರ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮಲ್ಲಿರುವ ಸಂಸ್ಕಾರ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ., ಮಕ್ಕಳ ನಡವಳಿಕೆಯ ಬಗ್ಗೆ ಪೋಷಕರು ಸದಾ ಗಮನ ಹರಿಸಿಕೊಂಡು ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಅಮೃತ ಮಹೋತ್ಸವ ಸಮಿತಿ ಐತಪ್ಪ ಆಳ್ವ ಸುಜೀರುಗುತ್ತು, ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಭಜನಾ ಂಮದಿರ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಗೌರವ ಸಲಹೆಗಾರ ಕಮಲಾಕ್ಷ ಗಂಧಗಾಡು, ಹಿರಿಯರಾದ ಜಾನಕಿ ಪದ್ಮನಾಭ, ಬಾಲಕೃಷ್ಣ ಗಾಂಭೀರ ಉಪಸ್ಥಿತರಿದ್ದರು.
ಯಶವಂತಿ ಕಿಶೋರ್ ಸ್ವಾಗತಿಸಿದರು, ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಕ್ಷ ಸಂತೋಷ್ ವಂದಿಸಿದರು. ವಿದ್ಯಾ ಶಿವರಾಜ್, ಹರ್ಷಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಸುಜೀರು ಸಹಜರಿಸಿದರು.