
ಬೆಂಗಳೂರು: ಕುಲಾಲ ಸಂಘ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ದಿವಾಕರ ಮೂಲ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಸಂಘದ ಜಂಟಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಪ್ರಥಮ ಉಪಾಧ್ಯಕ್ಷರಾಗಿ ದಿನೇಶ್ಚಂದ್ರ , ದ್ವಿತೀಯ ಉಪಾಧ್ಯಕ್ಷರಾಗಿ ರಮಾನಾಥ್ ಏತಡ್ಕ, ಪ್ರಧಾನ ಕಾರ್ಯದರ್ಶಿ ಯಾಗಿ ಆಶಾನಂದ್ ಕುಲಶೇಖರ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಕಣ್ವತೀರ್ಥ, ಕೋಶಾಧಿಕಾರಿಯಾಗಿ ರಮಾನಂದ್, ಜೊತೆ ಕೋಶಾಧಿಕಾರಿಯಾಗಿ ವೆಂಕಟೇಶ್ ರಟ್ಟಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸೇಸಪ್ಪ ಪೊಸಳ್ಳಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಹಿಮಕರ್ ಬಂಜನ್, ಮಹಿಳಾ ಘಟಕ ಸಂಚಾಲಕರಾಗಿ ಅನುಸೂಯ ಕೃಷ್ಣಪ್ಪ , ಯುವ ಘಟಕ ಸಂಚಾಲಕರಾಗಿ ಪ್ರಥಮ್ ಚೇಂಡ್ಲಾ, ಕ್ರೀಡಾ ಕಾರ್ಯದರ್ಶಿಯಾಗಿ ರಾಘವೇಂದ್ರ ಕುಲಾಲ್, ಕ್ರೀಡಾ ಜೊತೆಕಾರ್ಯದರ್ಶಿ ಯಾಗಿ ತಿಮ್ಮಪ್ಪ ಕುಲಾಲ್ ಆಯ್ಕೆಯಾದರು.
—
