
ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಹಾಗೂ ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆಯಲಿರುವ ವಿಶೇಷ ಪಂಚಾರತಿ ಸೇವೆಗೆ ಗುರುವಾರ ರಾತ್ರಿ ಮಂದಿರದಲ್ಲಿ ಚಾಲನೆ ನೀಡಿಲಾಯಿತು.


ಭಜನಾ ಮಂಗಳದ ಬಳಿಕ ಪಂಚ ಅತಿಥಿ ಅಭ್ಯಾಗತರಾದ
ಸಜೀಪ ಮಾಗಣೆಯ ತಂತ್ರಿ ವೇದಮೂರ್ತಿ ಎಂ. ಸುಬ್ರಹ್ಮಣ್ಯ ಭಟ್, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್, ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಪರಮೇಶ್ವರ ಮಯ್ಯ, ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಈಶ್ವರ ಭಟ್, ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಪ್ರಧಾನ ವೈದಿಕರಾದ ವೇದಮೂರ್ತಿ ಶಿವಾನಂದ ಐತಾಳ್
ದೇವರಿಗೆ ಪಂಚಾರತಿ ಬೆಳಗಿದರು. ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಮಾತನಾಡಿ ದೇವಳದ ಅಭಿವೃದ್ದಿ ಕಾರ್ಯಕ್ಕಾಗಿ ಪಂಚಾರತಿ ಸೇವೆ ಆರಂಭಿಸಿರುವುದು ಹೊಸ ಕಲ್ಪನೆಯಾಗಿದೆ. ಗಂಗಾರತಿ ಯಂತೆ ಪಂಚಾರತಿ ಸೇವೆಯೂ ಯಶಸ್ವಿಯಾಗಿ ನಡೆದು ಸಂಕಲ್ಪ ಈಡೇರಲಿ, ಭಕ್ತರ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಶುಭ ಹಾರೈಸಿದರು.

ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟಿನ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಅಭಿವೃದ್ಧಿ ಸಮಿತಿಯ ಸಹ ಗೌರವ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು, ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ, ಭಜನಾ ಸಮಿತಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ ಪದಾಧಿಕಾರಿ ಪ್ರಮುಖರಾದ ಯಾದವ ಬಂಗೇರ ಕಂಚಿಲ, ಚಂದ್ರಶೇಖರ ಗಟ್ಟಿ ಅಂದಾಡಿ, ಪ್ರವೀಣ್ ಗಟ್ಟಿ ಮಾರ್ನಬೈಲು, ಸಂದೀಪ್ ಕುಮಾರ್ ನಾಗನವಳಚ್ಚಿಲು, ಯೋಗೀಶ್ ಗಟ್ಟಿ ನಂದಾವರ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯ ಮಾರ್ನಬೈಲು, ನಿತಿನ್ ಕುಮಾರ್ ಮಾರ್ನಬೈಲು, ದೀಪ್ತೇಶ್ ಮೆಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಸ್ವಾಗತಿಸಿ, ನಿರೂಪಿಸಿದರು.
Advertisement







