
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜ| ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ 130ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.
ರೋಟರಿ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಶಿಬಿರ ಉದ್ಘಾಟಿಸಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದ ಮೂಲಕ ನಿರಂತರವಾಗಿ ರಕ್ತದಾನ ಶಿಬಿರ ನಡೆಯುತ್ತಿರುವುದು ಅಭಿನಂದನೀಯ. ಇದರ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ಎಲ್ಲಾ ಸಮಯದಲ್ಲೂ ಜನರ ಸೇವೆಗೆ ಲಭ್ಯವಿರುವುದು ಅವರ ಸೇವಾತತ್ಪರತೆಗೆ ಸಾಕ್ಷಿ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ಪ್ರಾಸ್ತವಿಕವಾಗಿ ಮಾತನಾಡಿ ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ 4 ಮಂದಿಯ ಜೀವ ಉಳಿಸಲು ಸಾಧ್ಯವಿದೆ ಎಂದರು.

ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿದರು.
ಸದಾನಂದ ಟೈಲರ್ ತುಂಬೆ ಹಾಗೂ ಪ್ರಶಾಂತ್ ಸುಜೀರ್ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಜ.ಕೆ.ಎಸ್. ಹೆಗ್ಡೆ. ಆಸ್ಪತ್ರೆಯ ವೈದ್ಯೆ ಡಾ. ಮಂಜುಶ್ರೀ, ಸೇವಾಂಜಲಿಯ ಉಮಾ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿವರಾಜ್ ಸುಜೀರ್
, ರಾಜೇಶ್ ಕಬೇಲ, ಸುರೇಶ್ ರೈ ಪೆಲಾಪಾಡಿ, ನಾರಾಯಣ ಬಡ್ಡೂರು, ಸಂತೋಷ್ ಸುಜೀರ್, ಅರ್ಜುನ್ ಪೂಂಜ, ಸೂರಜ್ ಪೊಳಲಿ,
ಕೃಷ್ಣ ಪೊಳಲಿ, ಪ್ರಶಾಂತ್ ತುಂಬೆ, ಮೋಹನ್ ಬೆಂಜನಪದವು, ಸುಕೇಶ್ ಶೆಟ್ಟಿ ತೇವು, ಪ್ರವೀಣ್ ಮೈಯ್ಯಾಡಿ ಭಾಗವಹಿಸಿದ್ದರು. ಶಿಬಿರದಲ್ಲಿ ಒಟ್ಟು 52 ಯುನಿಟ್ ರಕ್ತ ಸಂಗ್ರಹವಾಯಿತು.
