
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬಂಟ್ವಾಳ ಇದರ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಕಾಲ ಹೊಲಿಗೆ ತರಬೇತಿಯನ್ನು ವಗ್ಗ ವಲಯದ ವಾಮದಪದವು ಪ್ರೇರಣಾ ಜ್ಞಾನವಿಕಾಸ ಕೇಂದ್ರದಲ್ಲಿ ನಡೆಸಲಾಗಿದ್ದು ಅದರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಪುಂಜಾಲಕಟ್ಟೆ ವಲಯದ ಜನಜಾಗೃತಿ ವೇದಿಕೆ ಸದಸ್ಯ ಹರೀಂದ್ರ ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರ ಏಳಿಗಾಗಿ ಜ್ಞಾನವಿಕಾಸ ಕೇಂದ್ರದಡಿಯಲ್ಲಿ ನಡೆದಂತಹ ಹೊಲಿಗೆ ತರಬೇತಿ ಯಶಸ್ವಿಯಾಗಿದೆ ಎಂದರು.
ಮಾತೃಶ್ರೀ ಅಮ್ಮ ಕಾರ್ಯಕ್ರಮ ದಡಿಯಲ್ಲಿ ಕಲಿತಂತಹ ಹೊಲಿಗೆ ವೃತ್ತಿ ನಿಂತ ನಿರಾಗದೆ ಮುಂದುವರಿಸುವ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಬಂಟ್ವಾಳ ತಾಲೂಕು ಯೋಜನಾಧಿಕಾರ ಜಯಾನಂದ ಪಿ. ಮಾಹಿತಿ ನೀಡಿದರು.
ಅತೀ ಹೆಚ್ಚು ಸಾಲ ನೀಡುವ ಸಂಸ್ಥೆ ಹಾಗೂ ಅತಿ ಹೆಚ್ಚು ಸಮಾಜಕಕ್ಕೆ ಅನುದಾನ ವಿತರಣೆ ಮಾಡುವ ಸಂಸ್ಥೆ ಎಂದರೆ ಅದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ.
ತೆಗೆದ ಸಾಲವನ್ನು ಸರಿಯಾಗಿ ವಿನಿಯೋಗಿಸಿ ಕೊಂಡು ಸದುಪಯೋಗ ಪಡೆಸಿ ಕೊಳ್ಳಿ ಹಾಗೂ ಸಾಲದ ಕಂತು ಬಾಕಿ ಮಾಡದೆ ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಎಂದು ಜನಜಗೃತಿ ವೇದಿಕೆ ಸದಸ್ಯ ನವೀನ್ ಚಂದ್ರ ತಿಳಿಸಿದರು.
ಸಿಆರ್ ಪಿ ಚೇತನ, ಒಕ್ಕೂಟದ ಅಧ್ಯಕ್ಷೆ ಅನಿತಾ ಪ್ರಭು ಶುಭ ಹಾರೈಸಿದರು.

ಪಂಚಾಯತಿ ಉಪಾಧ್ಯಕ್ಷೆ ಜಯಂತಿ, ಹೊಲಿಗೆ ತರಬೇತಿ ಶಿಕ್ಷಕಿ ಪವಿತ್ರ, ಗೋಪಾಲ ಕೃಷ್ಣ ಚೌಟ, ಅನಂದ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೊಲಿಗೆ ತರಬೇತಿ ಪಡೆದ ಶ್ರೀನಿಧಿ, ಕವಿತಾ ಸುಮಿತ್ರ ಅನಿಸಿಕೆ ವ್ಯಕ್ತ ಪಡಿಸಿದರು ಹೊಲಿಗೆ ತರಬೇತಿ ಪಡೆದ ಸದಸ್ಯರಿಗೆ ಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಸೇವಾಪ್ರತಿನಿಧಿಗಳಾದ ಮೋಹನ್ ದಾಸ್ ಗಟ್ಟಿ ಹಾಗೂ ಹೇಮಲತಾ ಉಪಸ್ಥಿತರಿದ್ದರು.
ಪ್ರೇರಣಾ ಹಾಗೂ ನೇಸರ ಜ್ಞಾನವಿಕಾಸ ಕೇಂದ್ರ ದ ಸದಸ್ಯರು ಭಾಗವಹಿಸಿದ್ದರು.
ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಶ್ರುತಿ ಸ್ವಾಗತಿಸಿದರು. ಕೇಂದ್ರದ ಸಾಯೋಜಕಿ ಗುಣವತಿ ವಂದಿಸಿದರು.ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
