
ಬಂಟ್ವಾಳ: ಬಿ.ಸಿ.ರೋಡಿನ ಕೇಂದ್ರಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಎ.4ರಿಂದ ಎ.9ರ ವರಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ದೇವಸ್ಥಾನದ ಬಳಿಯ ಸಮತಟ್ಟುಗೊಳಿಸಿದ ವಿಶಾಲ ಗದ್ದೆ ಪ್ರದೇಶದಲ್ಲಿ ದೇವಸ್ಥಾನದ ತಂತ್ರಿ ಪಳನೀರು ಶ್ರೀ ಅನಂತಭಟ್ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭ ಶ್ರೀ ರಕ್ತೇಶ್ವರೀ ದೇವಿ ಸನ್ನೀದಿ ಸೇವಾಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ಉಪಾಧ್ಯಕ್ಷ ಬಿ. ಸಂಜೀವ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪಂಜಿಕಲ್ಲು, ಬೂಡ ಅಧ್ಯಕ್ಷ ಬೇಬಿ ಕುಂದರ್, ವಿವಿಧ ಸಮಿತಿಯ ಪ್ರಮುಖರಾದ ಅಶ್ವನಿ ಕುಮಾರ್ ರೈ, ಭುವನೇಶ್ ಪಚ್ಚಿನಡ್ಕ, ಐತಪ್ಪ ಪೂಜಾರಿ, ಚಂದ್ರಹಾಸ ಡಿ. ಶೆಟ್ಟಿ, ರವೀಂದ್ರ ಕಂಬಳಿ, ದೇವದಾಸ್ ಶೆಟ್ಟಿ, ನಾರಾಯಣ ಹೆಗ್ಡೆ, ಉಮೇಶ್ ಕುಮಾರ್ ವೈ, ಕಿಶೋರ್ ಕುಮಾರ್, ಸತೀಶ್ ಕುಮಾರ್, ಬಿ. ಮೋಹನ್, ಸದಾಶಿವ ಕೈಕಂಬ, ಗೋಪಾಲ ಸುವರ್ಣ, ನೇಮಿರಾಜ ಶೆಟ್ಟಿ ಕೊಡಂಗೆ, ಇಂದಿರೇಶ್ ಅಜ್ಜಿಬೆಟ್ಟು, ರಮೇಶ್ ಸಾಲ್ಯಾನ್, ಸತೀಶ್ ಶೆಟ್ಟಿ ಮೊಡಂಕಾಪು, ಶ್ರೀನಿವಾಸ ಪೂಜಾರಿ, ಸುಧೀರ್ ಶೆಟ್ಟಿ, ಪುಷ್ಪರಾಜ ಶೆಟ್ಟಿ,ಜೇಶ್ ಎಲ್. ನಾಯಕ್, ಅರ್ಚಕ ರಘುಪತಿ ಭಟ್, ಸತೀಶ್ ಕುಮಾರ್, ಸೋಮನಾಥ ನಾಯ್ಡು, ಆಶಾ ಪಿ. ರೈ, ಮತ್ತಿತರ ಗಣ್ಯರು ಭಾಗವಹಿಸಿದ್ದರು.
