
ಬಂಟ್ವಾಳ: ಕಳೆದ 30 ವರ್ಷಗಳಿಂದ ತೆಂಗಿನ ಮರ ಹಾಗೂ ಅಡಿಕೆಮರ ಏರುವ ಕಾಯಕ ನಿರ್ವಹಿಸುತ್ತಿರುವ ವಲೇರಿಯನ್ ರೋಡ್ರಿಗಸ್ ಅವರಿಗೆ ಜೆಸಿಐ ಬಂಟ್ವಾಳದ ವತಿಯಿಂದ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಸೋಮವಾರ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಘಟಕದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಲಯ ಉಪಾಧ್ಯಕ್ಷ ರಂಜಿತ್ ಎಚ್. ಡಿ. ಓರಿಯಂಟೇಷನ್ ತರಬೇತಿ ನಡೆಸಿಕೊಟ್ಟರು. ಬಳಿಕ ಮಾಸಿಕ ಸಭೆ ನಡೆಯಿತು. ಈ ಸಂದರ್ಭ ನಿಕಟಪೂರ್ವಾಧ್ಯಕ್ಷೆ ರಶ್ಮಿ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಆಚಾರ್ಯ, ಲೇಡಿ ಜೇಸಿ ಸಂಯೋಜಕಿ ಬಬಿತಾ ಗಣೇಶ್, ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.
Advertisement







