
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ನೂತನ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಯಾಜಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು.
2026-27 ಸಾಲಿನ ಅಧ್ಯಕ್ಷರಾಗಿ ರವಿಚಂದ್ರ ಬಂಟ್ವಾಳ, ಕಾರ್ಯದರ್ಶಿಯಾಗಿ ರವಿರಾಜ್ ಶೆಟ್ಟಿ, ಕೋಶಾಧಿಕಾರಿಯಾಗಿ ಐತಪ್ಪ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಪೂರ್ವ ರಾಜ್ಯಪಾಲ ವಿಕ್ರಂ ದತ್ತ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿ ಎಲ್ಲಾ ರೋಟರಿ ಸದಸ್ಯರು ಜೊತೆಯಾಗಿ ಕಾರ್ಯನಿರ್ವಹಿಸಿದಾಗ ರೋಟರಿ ಸಂಸ್ಥೆ ಔನತ್ಯಕ್ಕೆ ಹೋಗಲು ಸಾಧ್ಯವಿದೆ.ಮುಂದಿನ ವರ್ಷ ರೋಟರಿ ಕ್ಲಬ್ ಬಂಟ್ವಾಳಕ್ಕೆ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಹಾಯಕ ಗವರ್ನರ್ ಶಶಿಧರ್ ಡೋಂಗ್ರೆ ಕ್ಲಬ್ ಬುಲೆಟಿನ್ ರೋಟ್ವಾಲ್ ಬಿಡುಗಡೆಗೊಳಿಸಿ ಮಾತನಾಡಿ ನೂತನ ಅಧ್ಯಕ್ಷರ ಅವಧಿಯ ವರ್ಷ ಸುಗಮವಾಗಿ ನಡೆಯಲಿ, ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.ಝೋನಲ್ ಲೆಪ್ಟಿನೆಂಟ್ ಬೇಬಿ ಕುಂದರ್ ಮಾತನಾಡಿ ಪ್ರಶಸ್ತಿಗಾಗಿ ಕೆಲಸ ಮಾಡುವುದು ಬೇಡ ಕೆಲಸಕ್ಕಾಗಿ ಪ್ರಶಸ್ತಿಗಳು ಬರಲಿ ಎಂದರು.
ನೂತನ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಅಧಿಕಾರ ಸ್ಬೀಕರಿಸಿ ಮಾತನಾಡಿ ಉತ್ತಮ ಸೇವಾ ಕಾರ್ಯಗಳನ್ನು ಮಾಡಲು ಉತ್ಸುಕನಾಗಿದ್ದೇನೆ.ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು. ಕ್ಲಬ್ ಗೆ ಡೈಮಂಡ್ ಪ್ಲಸ್ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸುವುದಾಗಿ ತಿಳಿಸಿದರು.
ನಿರ್ಗಮನ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಮಾತನಾಡಿ ಈ ವರ್ಷ ನೀಡಿದ ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭ 4 ಮಂದಿ ನೂತನ ಸದಸ್ಯರನ್ನು ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು ಸೇವಾ ಯೋಜನೆಯಂಗವಾಗಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶ್ರೀ ಶಾರದ ಅಂದರ ಕೇಂದ್ರಕ್ಕೆ ಆರ್ಥಿಕ ನೆರವು , ಬ್ಲಡ್ ಬ್ಯಾಂಕಿಗೆ ದೇಣಿಗೆ ನೀಡಲಾಯಿತು. ನಿರ್ಗಮನ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಹಾಗೂ ನಿರ್ಗಮನ ಕಾರ್ಯದರ್ಶಿ ಮಹಮ್ಮದ್ ಯಾಸೀರ್ ಕಲ್ಲಡ್ಕ ಅವರನ್ನು ಗೌರವಿಸಲಾಯಿತು.

ನಿರ್ಗಮನ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಸ್ವಾಗತಿಸಿದರು.
ಕಾರ್ಯದರ್ಶಿ ಯಾಶೀರ್ ಕಲ್ಲಡ್ಕ, ಅನ್ಸ್ ಕ್ಲಬ್ ಅಧ್ಯಕ್ಷೆ ಗೌರಿ ಶೆಣೈ ವರದಿ ವಾಚಿಸಿದರು. ಶಶಿಕಲಾ ಸೋಮಯಾಜಿ ಹಾಗೂ ಮಂಜುನಾಥ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು.ಸದಸ್ಯ ಅಹಮದ್ ಮುಸ್ತಫ ಕಾರ್ಯಕ್ರಮ ನಿರೂಪಿಸಿದರು.

Advertisement







