ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲೆತ್ತೂರು ವಲಯ – ಮಂಚಿ ಒಕ್ಕೂಟದ ವತಿಯಿಂದ ಮಂಗಳವಾರ ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು ಇಲ್ಲಿ ಶಾಲಾವರಣವನ್ನು ಸ್ವಚ್ಛತೆಗೊಳಿಸುವ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ದಿವಾಕರ ನಾಯಕ್ ಕುಂಟೂರು, ಒಕ್ಕೂಟದ ಸೇವಾ ನಿರತೆ ಚಂಚಲಾಕ್ಷಿ, ಶಾಲಾ ಪ್ರಭಾಕರ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಉಪಸ್ಥಿತರಿದ್ದರು. 50 ಜನ ಒಕ್ಕೂಟದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
Advertisement
Advertisement
Advertisement
Advertisement