ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ ಪ್ರಯುಕ್ತ ನೂತನವಾಗಿ ನಿರ್ಮಾಣಗೊಂಡ ವೀರ ಸಾವರ್ಕರ್ ವಾಣಿಜ್ಯ ಸಂಕೀರ್ಣ, ನೇತಾಜಿ ಬಹು ಉಪಯೋಗಿ ಸೇವಾ ಕೇಂದ್ರ, ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ, ನವೀಕೃತ ಕಚೇರಿಯ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಅಮೃತ ಮಹೋತ್ಸವ ಹಾಗೂ ವೀರ ಸಾವರ್ಕರ್ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿ, ದೇಶ ಭಕ್ತ ಮಹಾಪುರುಷರಾದ ವೀರ ಸಾವರ್ಕರ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣೆ ಮಾಡಿದ ಸಂಘದ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಬಹುಪಯೋಗಿ ಸೇವಾ ಕೇಂದ್ರವನ್ನು ಉದ್ಘಾಟಸಿ ಮಾತನಾಡಿ,ಪ್ರಧಾನಿ ಮೋದಿ ಅವರು ರೈತ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದ ಅವರು ಅಡಿಕೆ ಬೆಳೆಯ ಬಗ್ಗೆ ಗೃಹಸಚಿವರು ಸ್ಪಷ್ಟ ಸಲಹೆ ನೀಡಿದ್ದು, ಕರಾವಳಿಯ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ವರ್ಷ ಈಗಾಗಲೇ ೭೫ ಕೋಟಿ ರೂ.ಗಳಿಗೂ ಅಧಿಕ ಸಾಲ ನೀಡಲಾಗಿದ್ದು ಆರ್ಥಿಕ ವರ್ಷ ಅಂತ್ಯಕ್ಕೆ ೧೦೦ ಕೋ.ರೂ. ಸಾಲ ನೀಡಲು ಗುರಿ ಹೊಂದಲಾಗಿದೆ ಎಂದರು.
ದ.ಕ.ಜಿ.ಹಾ.ಉ.ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ,ಬಂಟ್ವಾಳ ತಾಲೂಕು ಸಹಕಾರಿ ಕೃಷಿ ಉತ್ಪನ್ನ ಮಾರಾಟ ಸಂಘ ಅಧ್ಯಕ್ಷ ರವೀಂದ್ರ ಕಂಬಳಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿಸೋಜಾ , ಜಿ.ಪಂ.ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ,ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ರಮಾನಾಥ ರಾಯಿ, ಲಕ್ಷ್ಮೀಧರ ಶೆಟ್ಟಿ, ಸುಜಾತಾ ಆರ್.ಪೂಜಾರಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಯೋಗೀಶ್ ಆಚಾರ್ಯ,ಸುನಿತಾ ಪಿ.ಶೆಟ್ಟಿ, ಎಚ್.ಪ್ರಭಾಕರ ಹುಲಿಮೇರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎ.ಗೋಪಿನಾಥ ರೈ, ಪ್ರಭಾಕರ ಐಗಳ್, ಎಸ್.ಅರ್ಕಕೀರ್ತಿ ಇಂದ್ರ, ಯು.ಗೋಪಾಲ ಬಂಗೇರ, ಚಂದ್ರನಾಥ ಇಂದ್ರ, ಶೀನ ಶೆಟ್ಟಿ , ನಾಗರಾಜ ಬಂಗ, ಜನಾರ್ದನ ಶೆಟ್ಟಿಗಾರ್,ಜಗತ್ಪಾಲ ಶೆಟ್ಟಿ ಉಮನೊಟ್ಟು, ವಾಸು ಪೂಜಾರಿ ಕುಲಾವು, ಮನೀಷ್ ಶೆಟ್ಟಿ, ಸುಭಾಶ್ ಪರಾಡ್ಕರ್,ಅನಿತಾ ಮೊರಾಸ್, ಲಿಖಿತಾ, ರಾಜೇಶ್ ಗೋವಿಂದಬೆಟ್ಟು ಅವರನ್ನು ಸಮ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ, ನಿರ್ದೇಶಕರಾದ ಪದ್ಮರಾಜ ಬಲ್ಲಾಳ್ ಮಾವಂತೂರು, ಸಂದೇಶ್ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ದಿನೇಶ್ ಪೂಜಾರಿ ಹುಲಿಮೇರು, ಉಮೇಶ್ ಗೌಡ ಮಂಚಕಲ್ಲು, ಜಾರಪ್ಪ ನಾಯ್ಕ, ವೀರಪ್ಪ ಪರವ, ದೇವರಾಜ ಸಾಲ್ಯಾನ್, ಅರುಣಾ ಎಸ್. ಶೆಟ್ಟಿ, ವೃತ್ತಿಪರ ನಿರ್ದೇಶಕ ಮಾಧವ ಶೆಟ್ಟಿಗಾರ್, ಬ್ಯಾಂಕ್ ಪ್ರತಿನಿಧಿ ಕೇಶವ ಕಿಣಿ ಉಪಸ್ಥಿತರಿದ್ದರು.
ಪ್ರಭಾಕರ ಪ್ರಭು ಅವರು ಸ್ವಾಗತಿಸಿದರು.ನಿರ್ದೇಶಕಿ ಮಂದಾರತಿ ಶೆಟ್ಟಿ ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.