
ಬಂಟ್ವಾಳ: ನಮ್ಮ ಆಹಾರ ಪದ್ದತಿ, ಜೀವನಶೈಲಿ ಹಾಗೂ ಪರಿಸರ ಮಾಲಿನ್ಯದಿಂದ ರೋಗಗಳು ಹೆಚ್ಚಾಗುತ್ತಿದೆ . ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಜಿ.ಮಂಜುನಾಥ್ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಬುಧವಾರ ಸೇವಾಂಜಲಿ ಸಭಾಗ್ರಹದಲ್ಲಿ ಕ್ಷಯ ರೋಗಿಗಳಿಗೆ ಅಹಾರ ದವಸಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ಗುಣಮುಖವಾಗುವ ಕಾಯಿಲೆಯಾಗಿದ್ದು ಸಮಯಕ್ಕೆ ಸರಿಯಾದ ಔಷಧೋಪಚಾರ ಮಾಡಬೇಕು ಎಂದ ಅವರು ಸೇವಾಂಜಲಿಯ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಮಾತನಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ವ್ಯಕ್ತಿಗಳು ಸುಲಭವಾಗಿ ಕ್ಷಯ ರೋಗಕ್ಕೆ ತುತ್ತಾಗುತ್ತಾರೆ. ಎರಡು ವಾರಕ್ಕಿಂತ ಹೆಚ್ಚು ಸಮಯ ಕೆಮ್ಮು ಇದ್ದು ದೇಹದ ತೂಕ ಕಡಿಮೆಯದಾಗ ವೈದ್ಯರಿಂದ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದರು.


ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಮುಖರಾದ ಆನಂದ ಆಳ್ವ ಟ್ರಸ್ಟಿ ಸುರೇಶ್ ರೈ ಪೆಲಪಾಡಿ
ಉದ್ಯಮಿ ಇಕ್ಬಾಲ್ ಅತ್ತಾಯಿ ವೇದಿಕೆಯಲ್ಲಿದ್ದರು.
ಅರ್ಕುಳ ರಘುನಾಥ್ ಪೂಜಾರಿ, ಬಾಲಕೃಷ್ಣ ರೈ ದೇವಸ್ಯ
ಕೃಷ್ಣ ತುಪ್ಪೆಕಲ್ಲು, ಸುರೇಶ್ ಟೈಲರ್, ಪದನಾಭ ಕಿದೆಬೆಟ್ಟು
ಆರ್. ಎಸ್. ಜಯ ರಾಮಲ್ ಕಟ್ಟೆ, ದಿನೇಶ್ ತುಂಬೆ
ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಶಿವರಾಜ್ ಸುಜೀರ್ ಉಪಸ್ಥಿತರಿದ್ದರು
ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.
ಬಿಟಿಡಬ್ಲ್ಯು_ನ5_3
ಚಿತ್ರ: ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮ ದಲ್ಲಿ ಬಂಟ್ವಾಳ ತಹಶಿಲ್ದಾರ್ ಜಿ. ಮಂಜುನಾಥ್ ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಿಸಿದರು. ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಡಾ. ಚೇತನ್ ಉಪಸ್ಥಿತರಿದ್ದರು.
Advertisement







