
ಬಂಟ್ವಾಳ: ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು ನೂತನ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಬಂಟ್ವಾಳ ನಗರಯೋಜನಾ ಪಾಧ್ರಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಬಂಟ್ವಾಳ ಅವರು ಸ್ಥಾಪಕಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮೆಸ್ಕಾಂನ ನಿವೃತ್ತ ಎಂ.ಡಿ.ಮಂಜಪ್ಪ ಬಿಜೈ, ಮನಪಾ ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಪ್ರದಾನ ಕಾರ್ಯದರ್ಶಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಸೇಸಪ್ಪ ಮೂಲ್ಯ, ಕೋಶಾಧಿಕಾರಿಯಾಗಿ ನಿವೃತ್ತ ಆದಾಯ ತೆರಿಗೆ ಅಧಿಕಾರಿ ವಿಶ್ವನಾಥ ಕುದಾಯಿಆಯ್ಕೆಗೊಂಡಿದ್ದಾರೆ. ಉಳಿದಂತೆ ಟ್ರಸ್ಟಿಗಳಾಗಿ ಪೃಥ್ವಿರಾಜ್ ಆರ್.ಕೆ. ಎಡಪದವು, ಸೋಮಯ್ಯ ಹನೈನಡೆ ಬೆಳ್ತಂಗಡಿ, ಸುಂದರ ಬಂಗೇರ ಆದ್ಯಪಾಡಿ, ಗಿರೀಶ್ ಎಂ.ಪಿ ಕುತ್ತಾರ್ ಮಂಗಳೂರು, ಚಂದ್ರಹಾಸ ಪಲ್ಲಿಪಾಡಿ, ಭಾಸ್ಕರ ಎಂ. ಪೆರುವಾಯಿ ಪುತ್ತೂರು, ದೇವಪ್ಪ ಕುಲಾಲ್ ಪಂಜಿಕಲ್ಲು, ರಮೇಶ್ ಬಾಳೆಹಿತ್ತು ಬೆಂಗಳೂರು, ಉಮೇಶ್ ಕೆ. ಬೆಂಗಳೂರು, ದಯಾನಂದ ಬಂಟ್ವಾಳ್, ಬಾಸ್ಕರ್ ಅಜೆಕಳ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಟ್ರಸ್ಟ್ನ ಮೊದಲ ಸಭೆ ಮಂಗಳೂರಿನ ಹೊಟೇಲ್ ವುಡ್ ಲ್ಯಾಂಡ್ನಲ್ಲಿ ನಡೆದಿದ್ದು, ಕುಲಾಲ ಯುವಕ- ಯುವತಿಯರಿಗೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ತರಬೇತಿ, ಉನ್ನತ ಮಟ್ಟದ ಉದ್ಯೋಗಕ್ಕಾಗಿ ಮಾರ್ಗದರ್ಶನ ನೀಡುವುದು ಸಹಿತ ಸಮಾಜದ ಏಳಿಗೆಗಾಗಿ ಉಪಯೋಗವಾಗುವಂತೆ ಚಟುವಟಿಕೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.


Advertisement







