
ಬಂಟ್ವಾಳ: ಜಿಲ್ಲೆಯ ಶಾರದೋತ್ಸವಗಳ ಪೈಕಿ ತುಂಬೆಯ ಶಾರದೋತ್ಸವಕ್ಕೆ ತನ್ನದೇಯಾದ ವಿಶೇಷ ಮಹತ್ವ ಇದೆ. ಧರ್ಮ, ಸಂಸ್ಕಾರ, ರಾಷ್ಟ್ರೀಯ ಚಿಂತನೆಯ ಮೂಲಕ ಶಾರದೋತ್ಸವ ಇಲ್ಲಿ ನಡೆಯುತ್ತಿದ್ದು ಭಕ್ತಿ ಹಾಗೂ ಜ್ಞಾನ ಮಾರ್ಗದ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ಇಲ್ಲಿ ನಡೆಯುತ್ತಿರುವುದರಿಂದ ಇಲ್ಲಿ ಸಂಸ್ಕಾರದ ಶಿಕ್ಷಣ ಅನುಷ್ಠಾನ ಗೊಂಡಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಆಶ್ರಯದಲ್ಲಿ
ತುಂಬೆ ರಾಮಲ್ ಕಟ್ಟೆಯ ಶ್ರೀ ಶಾರದಾ ಸಮುದಾಯ ಭವನದಲ್ಲಿ ನಡೆದ 26 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಎರಡನೇಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಮಾತನಾಡಿ ಕಳೆದ 25 ವರ್ಷಗಳಿಂದ ಒಗ್ಗಟ್ಟಿನಿಂದ ಶಾರದಾ ಪೂಜೆಯನ್ನು ಆರಾಧನೆ ಮಾಡಿಕೊಂಡು ಬಂದಿರುವುದು ವಿಶೇಷ. ಮಹಿಳೆಯರಿಗೆ ಗೌರವದ ಸ್ಥಾನಮಾನ ನೀಡಿದಾಗ ಶಾರದೆಯನ್ನು ಪೂಜಿಸಿದಷ್ಟೇ ಫಲ ಪ್ರಾಪ್ತಿಯಾಗುತ್ತದೆ. ಆ ಕಾರ್ಯ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದರು.
ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್ ಮಾತನಾಡಿ
ಸಮುದಾಯ ಭವನ ಕಟ್ಟಿ ಲೋಕಾರ್ಪಣೆ ಮಾಡಿ ಶಾರದಾ ಪೂಜೆ ನಡೆಸಿಕೊಂಡು ಬರುವುದು ನಿಜಕ್ಕೂ ಅಭಿನಂದನೀಯ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಮೆಸ್ಕಾಂ ಸಹಾಯಕ ಇಂಜಿನಿಯರ್ ದೇವಿಕಿರಣ್ ಶೆಟ್ಟಿ, ದ.ಕ. ಕೇಟರಿಂಗ್ ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ಚೆನ್ನಪ್ಪ ಕುಲಾಲ್, ಉಪನ್ಯಾಸಕಿ ರೇಷ್ಮಾ ವಿನಯ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆಯ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕಾರ್ಯದರ್ಶಿ ದಿವಾಕರ ಪೇರ್ಲಬೈಲು, ಕೋಶಾಧಿಕಾರಿ ರಾಘವ ಬಂಗೇರ ಪೇರ್ಲಬೈಲು, ಉಪಾಧ್ಯಕ್ಷೆ ಶೋಭಾ ಗೋಪಾಲ ಮೈಂದನ್,
ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಕಿಶೋರ್ ನಿಸರ್ಗ ದೇಮುಂಡೆ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸಾಲ್ಯಾನ್ ತುಂಬೆ, ಜೊತೆ ಕಾರ್ಯದರ್ಶಿ ರವಿರಾಜ್, ಕೋಶಾಧಿಕಾರಿ ಸದಾನಂದ ಕೋಡಿಯಡ್ಕ, ಭವಾನಿ ಸೋಮಪ್ಪ ಕೋಟ್ಯಾನ್ ಉಪಸ್ಥಿತರಿದ್ದರು
ಸಂತೋಷ್ ಕೋಟ್ಯಾನ್ ತುಂಬೆ ಸ್ವಾಗತಿಸಿದರು, ಯೋಗೀಶ್ ಬೊಳ್ಳಾರಿ ವಂದಿಸಿದರು. ಯೋಗೀಶ್ ಕಜೆಕಂಡ ಕಾರ್ಯಕ್ರಮ ನಿರೂಪಿಸಿದರು.
Advertisement







