
ಬಂಟ್ವಾಳ: ಮಂಗಳೂರು ದಸರಾ ಎಂದೇ ಪ್ರಸಿದ್ದಿ ಪಡೆದಿರುವ ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ನಡೆದ ನವದುರ್ಗೆಯರು ಹಾಗೂ ಶ್ರೀಶಾರದಾ ದೇವಿ ವಿಗ್ರಹದ ಭವ್ಯ ಶೋಭಾಯಾತ್ರೆಯಲ್ಲಿ ಕುಲಾಲೆರ್ ಕುಡ್ಲ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಪ್ರಸ್ತುತ ಪಡಿಸಿದ ಚೊಚ್ಚಲ ನೃತ್ಯ ರೂಪಕ ಒಳಗೊಂಡ ಭಕ್ತಿಪ್ರಧಾನ ಟ್ಯಾಬ್ಲೋ “ಭಕ್ತಕುಂಬಾರ” ಪ್ರೇಕ್ಷಕರ ಮನ ಸೂರೆಗೈದಿದೆ.


ದಸರಾ ಸಂಭ್ರಮದಲ್ಲಿದ್ದ ಮಂಗಳೂರಿನ ಜನತೆಯನ್ನು
ಕುಡ್ಲ ಸೇವಾ ಚಾರಿಟೇಬಲ್ ಟ್ರಸ್ಟ್ ಸಾದರ ಪಡಿಸಿದ ಭಕ್ತ ಗೋರ ಕುಂಬಾರನ ಭಕ್ತಿ ಪ್ರದಾನ ದೃಶ್ಯ ರೂಪಕ ಭಕ್ತಿ ಪರಾಕಾಷ್ಠೆಯ ಸಿಂಚನದಲ್ಲಿ ಮುಳುಗೇಳುವಂತೆ ಮಾಡಿದೆ. ಇದೇ ಪ್ರಥಮ ಬಾರಿಗೆ ಕುಡ್ಲ ಸೇವಾ ಚಾರಿಟೇಬಲ್ ಟ್ರಸ್ಟ್ ಗೆ ಟ್ಯಾಬ್ಲೋ ಪ್ರದರ್ಶಿಸುವ ಅವಕಾಶ ಒದಗಿ ಬಂದಿದ್ದು ಟ್ರಸ್ಟ್ ಅಧ್ಯಕ್ಷ, ಬಂಟ್ವಾಳ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಅವರ ನೇತೃತ್ವದಲ್ಲಿ ತಂಡ ಭಕ್ತಿ ಸಂದೇಶ ಸಾರುವ ಟ್ಯಾಬ್ಲೋ ಪ್ರದರ್ಶಿಸಿ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ದೃಶ್ಯ ರೂಪಕವನ್ನು ಕಣ್ತುಂಬಿಕೊಂಡದ್ದು ಮಾತ್ರವಲ್ಲದೆ ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಯುವಲ್ಲಿ ತಲ್ಲೀನರಾಗಿದ್ದರು.


ನೃತ್ಯ ನಿರ್ದೆಶಕ ಮಹೇಶ್ ಕುಲಾಲ್ ಕಡೇಶಿವಾಲಯ ನೃತ್ಯ ನಿರ್ದೇಶನ ಮಾಡಿದ್ದರು.ಬಂಟ್ವಾಳದ ಜಯಗಣೇಶ್, ರಾಜೇಶ್ ಭಂಡಾರಿ ಬೆಟ್ಟು, ಭಾರತಿ ಟೀಚರ್, ಜ್ಯೋತಿ ಕುಲಾಲ್, ದಯಾನಂದ ನೇರಂಬೋಳು, ಗಣೇಶ್ ಬರ್ದೆಲ್, ಸಾನ್ವಿ ಸುಕುಮಾರ್, ಸಾದ್ವಿ ಸುಕುಮಾರ್, ಲಾಸ್ಯ ಎಸ್. ಬಂಗೇರ, ವಿದಿತ್ರಿ, ಶ್ರಾವಣಿ, ಅದ್ವಿತ್ ಪಲ್ಲಿಪಾಡಿ ಕಲಾವಿಧರಾಗಿ ಭಾಗವಹಿಸಿದ್ದರು.

ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಟ್ರಸ್ಟಿಗಳಾದ ಶೇಷಪ್ಪ ಟಿ. ಮೂಲ್ಯ, ದಯಾನಂದ ನೇರಂಬೋಳು, ದೇವಪ್ಪ ಕುಲಾಲ್ ಪಂಜಿಕಲ್ಲು, ಚಂದ್ರಹಾಸ ಪಲ್ಲಿಪ್ಪಾಡಿ, ಸೋಮಯ್ಯ ಹನೈನಡೆ, ಕುಲಾಲ ಸಮುದಾಯದ ಪ್ರಮುಖರಾದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು, ಸುಕುಮಾರ್ ಬಂಟ್ವಾಳ, ನಾರಾಯಣ ಸಿ. ಪೆರ್ನೆ, ಮನೋಹರ ನೇರಂಬೋಳು, ಎಚ್ಕೆ ನಯನಾಡು, ನಾಗೇಶ್ ಬಾಳೆಹಿತ್ಲು, ನವಿನ್ ಮಿತ್ತಬೈಲು, ಸೌಮ್ಯ ಸುಕುಮಾರ್, ಮೀನಾಕ್ಷಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು. ಕಲಾವಿದರು ಸಹಿತ ಟ್ಯಾಬ್ಲೋದ ಹಿನ್ನಲೆ, ತಾಂತ್ರಿಕ ಕೆಲಸಗಳಲ್ಲಿ ಕುಲಾಲರೇ ಭಾಗವಹಿಸಿದ್ದು ವಿಶೇಷ.
Advertisement







