ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸಬೇಕು, ಕಾಂಗ್ರೆಸ್ ಜನರಿಗೆ ಸುಳ್ಳು ಹೇಳುತ್ತಿದ್ದು ಬಿಜೆಪಿ ಕಾರ್ಯಕರ್ತರು ಜನರಿಗೆ ಸತ್ಯ ತಿಳಿಸುವ ಕಾರ್ಯ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು ಗ್ರಾಮ ಚಲೋ ಅಭಿಯಾನದಂಗದವಾಗಿ ಪುದು ಮಹಾಶಕ್ತಿ ಕೇಂದ್ರದ ವತಿಯಿಂದ ರಾಮಲ್ ಕಟ್ಟೆಯ ಶ್ರೀ ವೈದ್ಯನಾಥ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಗ್ಯಾರಂಟಿಗಳು ಜನರಿಗರ ಸಿಗುತ್ತಿಲ್ಲ, ಕಾಂಗ್ರೆಸ್ ನಾಯಕರು ಜನರಿಗೆ ಮುಖ ತೋರಿಸಿಕೊಳ್ಳಲಾಗದೆ ದೆಹಲಿಯತ್ತ ಹೋಗುತ್ತಿದ್ದಾರೆ ಎಂದು ಟೀಕಿಸಿದರು. ನಮ್ಮೆಲ್ಲರ ಹಲವು ವರ್ಷಗಳ ಕನಸಾದ ರಾಮ ಮಂದಿರ ನಿರ್ಮಾಣವನ್ನು ಮೋದಿ ಸರಕಾರ ಮಾಡಿದೆ, ಅತೀ ಹೆಚ್ಚು ಬಹುಮತದ ಮೂಲಕ ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡುವ ಸಂಕಲ್ಪ ತೊಡಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಗ್ರಾಮ ಚಲೋ ಕಾರ್ಯಕ್ರಮದಡಿ ಸಂಚಾಲಕ ಹಾಗೂ ಪ್ರವಾಸಿ ಕಾರ್ಯಕರ್ತರ ತಂಡ ಗ್ರಾಮದ ಪ್ರತೀ ಮನೆಗಳಿಗೂ ಭೇಟಿ ನೀಡಿ ಕೇಂದ್ರ ಸರಕಾರ ಜಾರಿಗೆ ತಂದ ಯೋಜನೆಗಳ ಮಾಹಿತಿಯನ್ನು ಜನರಿಗೆ ನೀಡಬೇಕು. ಪ್ರಾಮಾಣಿಕತೆ ಹಾಗೂ ನಿಷ್ಟೆಯಿಂದ ಈ ಕಾರ್ಯ ಮಾಡಬೇಕಾಗಿದ್ದು ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶ ಬರುವವರಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ವ್ಯವಸ್ಥಿತವಾಗಿ ಈ ಕಾರ್ಯ ಆಗಬೇಕು. ಕೆಂದ್ರದಲ್ಲಿ ಬಿಜೆಪಿ 400 ಕ್ಕಿಂತಲೂ ಅಧಿಕ ಸ್ಥಾನದಲ್ಲಿ ಗೆಲ್ಲಬೇಕು ಎಂದು ತಿಳಿಸಿದರು.
ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಮಾತನಾಡಿದರು. ಮನೋಜ್ ಆಚಾರ್ಯ ನಾಣ್ಯ ಪಿ.ಎಂ. ವಿಶ್ವಕರ್ಮ ಯೊಜನೆ ಹಾಗೂ ಗೋಡೆ ಬರಹ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ವಕ್ತಾರ ಮೋಹನ್ ರಾಜ್ ,
ಗ್ರಾಮ ಚಲೋ ಅಭಿಯಾನದ ಸಹಸಂಚಾಲಕರಾದ ಸುರೇಶ್ ಆಳ್ವ, ಮುರಳೀಧರ ಕೊಣಾಜೆ ಪಕ್ಷದ ಹಿರಿಯ ಕಾರ್ಯಕರ್ತರಾದ ಭಾಸ್ಕರ ಚೌಟ, ಗಂಗಾಧರ ಪೂಜಾರಿ, ಸೋಮಪ್ಪ ಕೋಟ್ಯಾನ್ ತುಂಬೆ
ಪದ್ಮನಾಭ ಶೆಟ್ಟಿ ಪುಂಚಮೆ, ಲಿಂಗಪ್ಪ ಕುಲಾಲ್
ವೇಣುಗೋಪಾಲ್, ಶಾಂತ ಚೌಟ ಪ್ರಮುಖರಾದ ಜಗನ್ನಾಥ ಸಾಲ್ಯಾನ್ ತುಂಬೆ, ವಿಠಲ ಸಾಲ್ಯಾನ್ ಕಡೆಗೋಳಿ, ಪ್ರವೀಣ್ ಶೆಟ್ಟಿ ಸುಜೀರ್, ಜಯರಾಂ ಶೆಟ್ಟಿ ಮೇರಮಜಲು, ಸಂಜೀವ ಪೂಜಾರಿ ರಾಮಲ್ ಕಟ್ಟೆ
ಆರ್ ಎಸ್ ಜಯ, ಜಲಜಾಕ್ಷಿ ಕೋಟ್ಯಾನ್,
ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿರಾಜುದ್ದೀನ್ ಮುಡಿಪು, ಜಿಲ್ಲಾ ವಕ್ತಾರ ಮೋಹನ್ ರಾಜ್ ಅವರನ್ನು ಪುದು ಮಹಾಶಕ್ತಿ ಕೇಂದ್ರದ ವತಿಯಿಂದ ಅಭಿನಂದಿಸಲಾಯಿತು.
ಜಯಶ್ರೀ ಕರ್ಕೆರ ಸ್ವಾಗತಿಸಿ, ದಿನೇಶ್ ಶೆಟ್ಟಿ ಕೊಟ್ಟಿಂಜ ವಂದಿಸಿದರು.