ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಿಂದ ನೀರು ಹರಿದು ಬರುವ ರಭಸಕ್ಕೆ ಕೆಳಭಾಗದ ಬಲ ಪಾರ್ಶ್ವ ದಲ್ಲಿರುವ ಕೃಷಿ ಭೂಮಿ ಕೊಚ್ಚಿ ಹೋಗಿ ರೈತರು ನಷ್ಟ ಅನುಭವಿಸಿದ್ದು ಸೂಕ್ತ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸಿಕೊಡಿ ಎಂದು ಆಗ್ರಹಿಸಿ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿದರು.
ಡ್ಯಾಂನ ಪ್ರವೇಶ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಬಾರದೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸ್ಥಳದಲ್ಲೇ ಅಡಿಗೆ ತಯಾರಿಸಲು ಆರಂಭಿಸಿದರು.
Advertisement
ಸ್ಥಳಕ್ಕೆ ಮನಪಾ ಇಂಜಿನಿಯರ್ ನರೇಶ್ ಶಣೈ, ತಹಶೀಲ್ದಾರ್ ಎಸ್ ಬಿ. ಕೂಡಲಗಿ ಮತ್ತಿತರು ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ನಡೆಸಿದರೂ ಜಗ್ಗದೆ ಪ್ರತಿಭಟನೆ ಮುಂದುವರೆಸಿರು. ರೈತ ಸಂಘದ ಮನೋಹರ ಶೆಟ್ಟಿ, ಶ್ರೀದರ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಮುರುವ ಮಹಾಬಲ ಭಟ್, ಇದಿನಬ್ಬ ಸುದೇಶ್ ಮಯ್ಯ, ಭಾಸ್ಕರ, ಆಮ್ ಆದ್ಮಿ ಪಕ್ಷದ ವಿಷುಕುಮಾರ್ ಜನಾರ್ದನ ಬಂಗೇರ ಉಪಸ್ಥಿತರಿದ್ದರು.
Advertisement