ಬಂಟ್ವಾಳ: ಇತ್ತೀಚೆಗೆ ಬಿ.ಸಿ.ರೋಡಿನ ಕೈಕಂಬದಲ್ಲಿ ಸರಣಿ ಕಳವು ನಡೆದು ಜನತೆ ಆತಂಕದಲ್ಲಿರುವ ಮಧ್ಯೆಯೇ ಇದೀಗ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿ, ಹೊಟೇಲ್ ಗಳಿಗೆ ಕಳ್ಳರು ನುಗ್ಗಿ ಸರಣಿ ಕಳವು ನಡೆಸಿದ್ದಾರೆ.
Advertisement
ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ಹೊಟೇಲ್ ಆನಿಯಾ ದರ್ಬಾರ್ ಹಾಗೂ ಅದರ ಸುತ್ತಮುತ್ತಲಿನ ಕೆಲ ಅಂಗಡಿಗಳ ಶಟರ್ ಬೀಗ ಮುರಿದು ನಗದು ಕಳ್ಳತನ ನಡೆಸಿರುವುದು ಸೋಮವಾರ ಬೆಳಕಿದೆ ಬಂದಿದೆ. ಅಂಗಡಿ, ಹೊಟೇಲ್ ಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿರುವುದು ವ್ಯಾಪರಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಬಿ.ಸಿ.ರೋಡು ಪರಿಸರದಲ್ಲಿ ಕಳ್ಳತನ, ಚಿನ್ನಾಭರಣ ದೋಚುವ ಘಟನೆ ನಡೆಯುತ್ತಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಕಳ್ಳತನ ನಡೆಸುವ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.
Advertisement