Advertisement
ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ಅಂಗಡಿ, ಹೊಟೇಲ್ ಹಾಗೂ ಸಹಕಾರಿ ಸಂಘಗಳ ಬೀಗ ಮುರಿದು ಒಳ ನುಗ್ಗಿ ಕಳ್ಳನೊರ್ವ ನಗದು ಕಳವು ನಡೆಸುತ್ತಿರುವ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಶನಿವಾರ ರಾತ್ರಿ ಕಳ್ಳ ಕೈಕಂಬದ ಹೊಟೇಲ್, ಅಂಗಡಿ, ಸಹಕಾರಿ ಸಂಘಗಳ ಬೀಗ ಮುರಿದು ಸಾವಿರಾರು ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ.
ಮುಖಕ್ಕೆ ಬಟ್ಟೆ ಸುತ್ತಿ ಅದರ ಮೇಲೆ ಹೆಲ್ಮೆಟ್ ಇಟ್ಟು, ಕೈಯಲ್ಲಿ ಸಣ್ಣ ಕಬ್ಬಿಣದ ರಾಡ್ ಹಿಡಿದುಕೊಂಡು ಕಳವು ನಡೆಸುತ್ತಿರುವ ಹಾಗೂ ಸಿಸಿ ಕ್ಯಾಮಾರಗಳನ್ನು ಹಾನಿ ಮಾಡಿ ತಿರುಗಿಸಿಡುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಒಬ್ಬನೇ ಕಳ್ಳ ಎಲ್ಲಾ ಅಂಗಡಿ, ಹೊಟೇಲ್, ಸಹಕಾರಿ ಸಂಘಗಳ ಬೀಗ ಮುರಿದು ಕಳ್ಳತನ ನಡೆಸಿದ್ದು ಪೊಲೀಸರು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.
Advertisement