Advertisement
ಬಂಟ್ವಾಳ: ಪುದು ಗ್ರಾಮದ ಕೋಡಿಮಜಲು ನಿವಾಸಿ ಮೊಹಮ್ಮದ್ ಜಾಪರುಲ್ಲಾ ಎಂಬವರ ಮನೆಯಲ್ಲಿ ನಡೆದ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಆರೋಪಿಗಳಿಂದ ಚಿನ್ನಾಭರಣ ಹಾಗೂ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೊಹಮ್ಮದ್ ಜಾಪರುಲ್ಲಾ ಮನೆಯಲ್ಲಿ ಇತ್ತೀಚೆಗೆ ರೂಪಾಯಿ 27.50 ಲಕ್ಷ ನಗದು ಹಾಗೂ ರೂ 4.96ಲಕ್ಷ ಮೌಲ್ಯದ ಚಿನ್ನಾಭರಣಗಳ ಕಳವು ನಡೆದಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಅಶ್ರಪ್ ಆಲಿ ಮತ್ತು ಬೆಂಗ್ರೆಯ ಕಬೀರ್ ಎಂಬವರನ್ನು ಬಂಧಿಸಿ ಅವರಿಂದ 4.50 ಲಕ್ಷ ಮೌಲ್ಯದ ಮೌಲ್ಯ ಚಿನ್ನ ಮತ್ತು ರೂ. 4 ಲಕ್ಷ ನಗದನ್ನು ವಶಪಡಿಸಿಕೊಂಡಿರುತ್ತಾರೆ.
Advertisement