ಬಂಟ್ವಾಳ : ಇಲ್ಲಿನ ಬಂಟ್ವಾಳ ಕಸ್ಬಾ ಗ್ರಾಮದ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಗೌಜಿದ ಲೇಸ್ ಕಾರ್ಯಕ್ರಮ ನ.12ರಂದು ನೇರಂಬೋಳಿನ ಶ್ರೀ ರಕ್ತೇಶ್ವರಿ ಸಭಾಭವನದಲ್ಲಿ ನಡೆಯಲಿದೆ.
ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ನೇರಂಬೋಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಸಾಹಿತಿ ಕುವಿಕು ಕಣ್ವತೀರ್ಥ, ಪಣೋಲಿಬೈಲು ಭಂಡಾರದ ಮನೆಯ ರಮೇಶ್ ಕುಲಾಲ್ ಪಣೋಲಿಬೈಲು, ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಯಶಂಕರ ಕಾನ್ಸಾಲೆ, ಉದ್ಯಮಿ ನಾಗೇಶ್ ಸಾಲ್ಯಾನ್, ಭಾರತ ಸೇವಾದಳದ ಅಧ್ಯಕ್ಷ ಸೇಸಪ್ಪ ಮಾಸ್ತರ್ ಭಾಗವಹಿಸಲಿದ್ದಾರೆ.
ಬೆಳಿಗ್ಗೆ ಸನಾತನ ಸತ್ಸಂಗ ಧಾರ್ಮಿಕ ಭಾಷಣ, ತುಳುನಾಡಿನ ಆಯ್ದ ಸ್ಥಳೀಯ ಕ್ರೀಡಾಕೂಟ, ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ಮತ್ತು ಮಧ್ಯಾಹ್ನದ ನಂತರ ಸಂಜೀವ ಕಜೆಪದವು ಇವರ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ಪಾಪಣ್ಣ ವಿಜಯ ಗುಣಸುಂದರಿ ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸಚಿನ್ ನೇರಂಬೋಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.