![](https://aksharanews.in/wp-content/uploads/2023/10/466429C3-944E-45BB-972F-56A3A60347F4.jpeg)
ಬಂಟ್ವಾಳ: ತಾಲೂಕಿನ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 5 ಜೋಡಿ ಅವಳಿ ಜವಳಿ ಮಕ್ಕಳು ಒಂದೇ ತರಗತಿಯಲ್ಲಿ ಕಲಿಯುತ್ತಿದ್ದು ಗಮನ ಸೆಳೆದಿದ್ದಾರೆ. ಶಾಲೆಯ ಎಂಟನೇ ತರಗತಿಯಲ್ಲಿ ಈ ಅವಳಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ ಜವಳಿ ವಿದ್ಯಾರ್ಥಿಗಳಾಗಿದ್ದು, 5 ಜೋಡಿ ಅವಳಿ ಮಕ್ಕಳು ಒಂದೇ ಶಾಲೆಯ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
![](https://aksharanews.in/wp-content/uploads/2024/01/aksharanews-ad.jpg)