ಬಂಟ್ವಾಳ: ಓಂಕಾರ ಸೇವಾ ಬಳಗ ದುರ್ಗಾನಗರ ಕುರಿಯಾಳ ಇದರ ದಶಮಾನೋತ್ಸವದ ಪ್ರಯುಕ್ತ ಕೆಸರ್ದ ಕಂಡೊಂಡು ಕುಸಾಲ್ದ ಗೊಬ್ಬು, ಸಾಧಕರಿಗೆ ಗೌರವಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ವನ್ನು ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಕೃಷ್ಣ ಅರಳಿತ್ತಾಯ ಉದ್ಘಾಟಿಸಿದರು, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತಿ ಸದಸ್ಯ ರೂಪೇಶ್ ಕುಟೀಲ, ದ.ಕ.ಸೌಹಾರ್ದ ಸಹಕಾರಿ ಸಂಘ ಅಣ್ಣಳಿಕೆ ಇದರ ಉಪಾಧ್ಯಕ್ಷ ದೇವಪ್ಪ ಕುಲಾಲ್ ಪಂಜಿಕಲ್ಲು ಮೊದಲಾದವರು ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಧನರಾಜ್ ಶೆಟ್ಟಿ ಫರಂಗಿಪೇಟೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ತುಳುನಾಡ ಸಾಂಸ್ಕೃತಿಕ ವಿಮರ್ಶಕ ತಮ್ಮಣ್ಣ ಶೆಟ್ಟಿ, ನಮ್ಮ ಕುಡ್ಲ ವಾಹಿನಿಯ ವಾರ್ತವಾಚಕಿ ಡಾ ಪ್ರಿಯ ಹರೀಶ್, ಅಮ್ಟಾಡಿ ಗ್ರಾ.ಪಂ. ಸದಸ್ಯರಾದ ಹರೀಶ್ ಶೆಟ್ಟಿ ಪಡು, ಯಶೋಧ ಮೇಗಿನ ಕುರಿಯಾಳ, ಉದ್ಯಮಿ ದಿನೇಶ್ ಬಡಕೊಟ್ಟು, ಪತ್ರಕರ್ತ ಸಂದೀಪ್ ಸಾಲ್ಯಾನ್, ಮೆಸ್ಕಾಂ ಶಾಖಾಧಿಕಾರಿ ಯೋಗೀಶ್ ಅಂಚನ್, ಉದ್ಯಮಿ ರತ್ನಕರ ಬಳ್ಳಿ, ಚಿತ್ತಾರ ಡಿಜಿಟಲ್ಸ್ ನ ಚಿದಾನಂದ, ಓಂಕಾರ ಸೇವಾ ಬಳಗದ ಅಧ್ಯಕ್ಷ ಸಂತೋಷ್ ಸುವರ್ಣ ದುರ್ಗಾನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ತಾಟೆ ಹಾಗೂ ಬೊಟ್ಟಿಮಾರ್ ಕೋಣಗಳನ್ನು ಹಾಗೂ ಕೋಣಗಳ ಯಜಮಾನ ಸತೀಶ್ಚಂದ್ರ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.