ಬಂಟ್ವಾಳ: ಮಾಣಿಲ ಶ್ರೀಧಾಮದ ಶ್ರೀ ದುರ್ಗಾಮಹಾಲಕ್ಷ್ಮಿ ಕ್ಷೇತ್ರದಲ್ಲಿ ನಡೆದ ಬೆಳ್ಳಿಹಬ್ಬ ಮಹೋತ್ಸವದ ಶ್ರೀ ವರಮಹಾಲಕ್ಮ್ಮಿ ವ್ರತಾಚರಣೆ ಯಶಸ್ವಿಯಾಗಿ ನಡೆದ ಬಗ್ಗೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳ ಉಪಸ್ಥಿತಿಯಲ್ಲಿ ಕೃತಜ್ಞತಾ ಸಮರ್ಪಣಾ ಸಭೆ ಮತ್ತು ಅ. 15ರಿಂದ ಅ. 25 ತನಕ ನಡೆಯುವ ಬೆಳ್ಳಿ ಹಬ್ಬ ಮಹೋತ್ಸವದ ಬೆಳ್ಳಿಹಬ್ಬ ಮಹೋತ್ಸವದ ಶರನ್ನವರಾತ್ರಿ ಉತ್ಸವದ ಪೂರ್ವ ಭಾವಿ ವಿಶೇಷ ಸಭೆಯು ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡಿನಲ್ಲಿ ಬೆಳ್ಳಿ ಹಬ್ಬ ಸಮಿತಿಯ ಸದಸ್ಯರು ಟ್ರಸ್ಟಿಗಳ ಸಮ್ಮುಖದಲ್ಲಿ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಮಾಣಿಲ ನಂಬುಗೆಯ ಆಧಾರದಲ್ಲಿ ನಿಂತ ನೆಲ. ನಿತ್ಯಾನಂದರು ಸಂತನಾಗಿ ಎಲ್ಲರೊಂದಿಗೆ ಆನಂದ ನೀಡಿದ ದಿವ್ಯ ಪುರುಷ. ಮಹಾಲಕ್ಷ್ಮಿ ದೇವಿಯ ಸೇವೆಯಿಂದ ನಂಬಿದ ಭಕ್ತರಿಗೆ ಪ್ರಾಪ್ತಿ ಫಲ. ಮಾಣಿಲ ಸರ್ವ ಜಾತಿ ಜನಾಂಗವನ್ನು ಎಂದಿಗೂ ಸ್ವಾಗತಿಸುವ ಕರುಣಾಳು ಸ್ಥಳ. ನಾನು ಸಂತ ಮಾತ್ರ ನೀವು ಕ್ಷೇತ್ರ ಅಭಿವ್ರದ್ದಿಯ ಸೂತ್ರ ಎಂದರು.
ಬೆಳ್ಳಿ ಹಬ್ಬದ ಶ್ರೀ ಧಾಮದ ಶರನ್ನವರಾತ್ರಿಗೆ ಎಲ್ಲರ ಭಕ್ತಿ ಸಹಕಾರವನ್ನು ಶ್ರೀಗಳು ಕೋರಿದರು. ಶ್ರೀ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷ ಬಿ.ವಿಶ್ವನಾಥ್ ಪ್ರಮುಖರಾದ ಬೇಬಿ ಕುಂದರ್, ಟಿ.ಶೇಷಪ್ಪ ಮೂಲ್ಯ, ನಾರಾಯಣ್, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಟ್ರಸ್ಟಿಗಳಾದ ಸುಧಾಕರ್ ಸಾಲಿಯಾನ್, ಮಚ್ಚೇಂದ್ರ ಸಾಲಿಯಾನ್, ನ್ಯಾಯವಾದಿ ಸುರೇಶ್ ಕುಮಾರ್ ನಾವೂರು, ನಾರಾಯಣ ಸಿ.ಪೆರ್ನೆ, ಮನೋಹರ ನೇರಂಬೋಳು, ಶಿವಶಂಕರ್, ಸುಕುಮಾರ್ ಬಂಟ್ವಾಳ, ನಿತೇಶ್ ಕುಲಾಲ್ ಪಲ್ಲಿಕಂಡ, ಜಯಂತ್ ವಗ್ಗ, ರಮೇಶ್ ಪಣೋಲಿಬೈಲ್, ಜಯಾನಂದ ಪೆರಾಜೆ, ಕರುಣೇಂದ್ರ ಪೂಜಾರಿ, ಕೇಶವ ಅಸಲ್ದೋಡಿ, ವಿಠಲ ಕುಲಾಲ್ ಪಲ್ಲಿಕಂಡ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಭಾಸ್ಕರ್ ಕುಲಾಲ್ ಬೆಂಗಳೂರು ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ಪ್ರ.ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿದರು. ಟ್ರಸ್ಟಿ ಮಚ್ಚೆಂದ್ರ ಸಾಲಿಯಾನ್ ವಂದಿಸಿದರು.