ಬಂಟ್ವಾಳ: ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ದಕ್ಷಿಣ ಕನ್ನಡ ಜಿಲ್ಲಾ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವಂತ ದೈವಸ್ಥಾನಗಳು ದೇವಸ್ಥಾನಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ವರ್ಷಂಪ್ರತಿ ನಡೆಯುತ್ತಿರುವಂತ ಜಾತ್ರಾ ಮಹೋತ್ಸವಗಳು ಬ್ರಹ್ಮಕಲಶೋತ್ಸವಗಳು ನೇಮೋತ್ಸವಗಳು ಹಾಗೂ ಸನಾತನ ಹಿಂದೂ ಧರ್ಮದ ಯಾವುದೇ ಉತ್ಸವದ ಕಾರ್ಯಕ್ರಮಗಳಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡದೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಎಲ್ಲಾ ಬಡ ವ್ಯಾಪಾರಸ್ಥರಿಗೆ ಬೀದಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸಿ ಅದಲ್ಲದೆ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಮಧ್ಯವರ್ತಿಗಳನ್ನ ಬಳಸಿಕೊಳ್ಳದೆ ನೇರ ಆಡಳಿತ ಮಂಡಳಿಯವರು ಹಾಗೂ ಧಾರ್ಮಿಕ ಇಲಾಖೆಯ ಅಧಿಕಾರಿಗಳು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಡಿಮೆ ದರದಲ್ಲಿ ಸನಾತನ ಹಿಂದೂ ಜಾತ್ರಾ ಬಡ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿ ಹಾಗು ಕಾರ್ಯಕ್ರಮಗಳು ಮುಗಿದ ನಂತರ ಶುಚಿತ್ವವನ್ನು ಕಾಪಾಡುವಂತ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ಆಶಯದಂತೆ ಸ್ವಚ್ಛ ಭಾರತ್ ಕಲ್ಪನೆಯೊಂದಿಗೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಸದಸ್ಯರೆಲ್ಲರೂ ಈ ಒಂದು ಕಾರ್ಯವನ್ನು ಯಶಸ್ವಿಯಾಗಿ ಮಾಡುವಲ್ಲಿ ದೈವಸ್ಥಾನ, ದೇವಸ್ಥಾನದ ಆಡಳಿತ ಮಂಡಳಿಯವರೊಂದಿಗೆ ಕೈಜೋಡಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇವರಿಗೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ದಿನೇಶ್ ಅಮ್ಟೂರು ಹಾಗು ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್ ಕಲ್ಲಡ್ಕ, ಗೌರವಾಧ್ಯಕ್ಷ ರವೀಂದ್ರನಾಥ್ ಇವರುಗಳು ಮನವಿ ನೀಡಿ ವಿನಂತಿಸಿದರು.
ಈ ಒಂದು ಸಂದರ್ಭದಲ್ಲಿ ಪದಾಧಿಕಾರಿಗಳಾದ ಪ್ರಸಾದ್ ಆರ್. ಶಂಭೂರು, ಧನು ಕುಂಡಡ್ಕ ರಾಜೇಂದ್ರ ಕೋಟ್ಯಾನ್, ಬೆಳ್ತಂಗಡಿ ಸತೀಶ್ ಬಂಗೇರ ತುಂಬೆ ಶಶಿ ಉಜಿರೆ ಸತೀಶ್ ಪಾಣೆಮಂಗಳೂರು ಜಗದೀಶ್ ದಾಸ್ ಮಡಂತ್ಯಾರ್ ಪ್ರದೀಪ್ ದಾಸ್ ಸುರೇಂದ್ರ ಭಂಡಾರಿ ಮೂಲ್ಕಿ ಚರಣ್ ತೊಕ್ಕೋಟ್ಟು ಪ್ರಾಣೇಶ್ ಜಪ್ಪಿನ ಮುಗೇರು ಹಾಗು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು