ಬಂಟ್ವಾಳ: ಪಾಣೆಮಂಗಳೂರಿನ ಬಂಗ್ಲೆಗುಡ್ಡೆ ಶ್ರೀ ಕಲ್ಲುರ್ಟಿ- ಕಲ್ಕುಡ ದೈವಸ್ಥಾನದ ಸಭಾಂಗಣದಲ್ಲಿ ರೈತ ಸಂಘದ ಸಭೆ ಬಂಟ್ವಾಳ ತಾಲೂಕುಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರುಗಿತು. ರೈತರ ಕುಮ್ಕಿ ಹಕ್ಕು, ರಾಜ ಕಾಲುವೆ ಒತ್ತುವರಿ ತೆರವು, ರೈತರ ಹಾಲಿನ ಪ್ರೋತ್ಸಾಹಧನ ಬಾಕಿ ಪಾವತಿ, ನಿಯಮಿತವಾಗಿ ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ರೈತರ ಕುಂದು ಕೊರತೆ ಸಭೆ ಈ ಎಲ್ಲ ವಿಚಾರಗಳ ಬಗ್ಗೆ ಕರ್ನಾಟಕ ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಅವರನ್ನು ರೈತರ ನಿಯೋಗ ಶೀಘ್ರವೇ ಭೇಟಿಯಾಗಿ ಚರ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
Advertisement
ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳ ಗುತ್ತು, ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ, ಸದಸ್ಯರಾದ ದಿಲೀಪ್ ರೈ, ಭೋಜ, ಲಕ್ಷ್ಮ, ಸುದೇಶ ಶೆಟ್ಟಿ. ಸೋಮನಾಥ ಭಂಡಾರಿ. ಮೊದಲಾದವರು ಉಪಸ್ಥಿತರಿದ್ದರು.
Advertisement