
ಬಂಟ್ವಾಳ: ಗೋಳ್ತಮಜಲು ಗ್ರಾಮ ಪಂಚಾಯತಿ ಗೆ ಸಂಬಂಧಪಟ್ಟ ಅಮ್ಟೂರು ಶಕ್ತಿ ಕೇಂದ್ರ ಮತ್ತು ಗೋಳ್ತಮಜಲು ಶಕ್ತಿ ಕೇಂದ್ರದ ವತಿಯಿಂದ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಅಮ್ಟೂರು ಗ್ರಾಮದ ರಾಯಪ್ಪ ಕೋಡಿಯ ಲಕ್ಷದೀಪೋತ್ಸವ ಕಟ್ಟೆಯಿಂದ ಗೋಳ್ತಮಜಲು ಗ್ರಾಮ ಪಂಚಾಯತಿ ವರೆಗೆ ಕಾಲ್ನಡಿಗೆ ಜಾಥದ ಮೂಲಕ ಪ್ರತಿಭಟನೆ ಹಾಗೂ ಕಲ್ಲಡ್ಕ ಶ್ರೀ ರಾಮ ಮಂದಿರದ ಎದುರು ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಕೆಳಭಾಗದಲ್ಲಿ ಹಕ್ಕೋತ್ತಾಯ ಸಭೆಯು ನಡೆಯಿತು.

ಈ ಸಂದರ್ಭದಲ್ಲಿ ಬಾಲ ಭವನ ನಿಗಮದ ಮಾಜಿ ಅಧ್ಯಕ್ಷೆ ಬಿಜೆಪಿಯ ರಾಜ್ಯದ ಮಾಜಿ ಉಪಾಧ್ಯಕ್ಷರಾದ ಸುಲೋಚನ ಜಿ.ಕೆ. ಭಟ್ ಮಾತನಾಡಿ ಹಾಲು, ಮೊಸರು, ವಿದ್ಯುತ್, ಬಸ್ ಪ್ರಯಾಣ ದರ, ಇಂಧನದ ಮೇಲಿನ ತೆರಿಗೆ, ಹೀಗೆ ಎಲ್ಲ ಅಗತ್ಯ ವಸ್ತುಗಳನ್ನು ದುಬಾರಿಯಾಗಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೈಕೋರ್ಟ್ ವಿಮರ್ಶೆ ನಡೆಸಿದೆ. ಬಹುಶಃ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ಸಹ ಗಾಬರಿಗೊಳ್ಳುವ ಮಟ್ಟಿಗೆ ಸರ್ಕಾರ ಬೆಲೆ ಏರಿಸಿದೆ.ದೀಪಾವಳಿ ಹಬ್ಬದ ಸಂದರ್ಭದಲ್ಲಿ ತುಪ್ಪದಿಂದ ಹಿಡಿದು ಎಲ್ಲವೂ ದುಬಾರಿಯಾಗಿದೆ. ಸರ್ಕಾರ ಉಚಿತ ಉಚಿತ ಎನ್ನುತ್ತಾ, ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರು ಹಬ್ಬ ಆಚರಿಸುವುದನ್ನೇ ದುಸ್ತರವಾಗಿಸಿದೆ ಎಂದು ತಿಳಿಸಿದರು .

ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಮಾತನಾಡಿ ಸರ್ಕಾರದ ಜವಾಬ್ದಾರಿ ಜನರ ಜೀವನವನ್ನು ಸುಗಮವಾಗಿಸುವುದೇ ಹೊರತು, ಜನರ ಸುಲಿಗೆ ನಡೆಸುವುದಲ್ಲ. ನಿಜಕ್ಕೂ ಜಿರಳೆಗಳು ಪ್ರತಿಭಟನೆ ನಡೆಸಬೇಕಿರುವುದು ಜನಜೀವನವನ್ನು ಹೈರಾಣಾಗಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ.
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಹೀಗೇ ಮುಂದುವರಿದರೆ ಜನರ ಆಕ್ರೋಶ ಸರ್ಕಾರವನ್ನು ಖಂಡಿತವಾಗಿಯೂ ಉರುಳಿಸಲಿದೆ ಎಂದರು.
ಈ ಸಂದರ್ಭದಲ್ಲಿ ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೋಟ್ಟಾರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಕುಮಾರ್ ರಾಯಪ್ಪ ಕೋಡಿ ನವೀನ್ ಗಟ್ಟಿ ನೆಟ್ಲ ಪ್ರಮುಖರಾದ ಮೋನಪ್ಪ ದೇವಸ್ಯ, ಕಮಲಾಕ್ಷಿ ಪೂಜಾರಿ, ಲಖೀತಾ ಆರ್ ಶೆಟ್ಟಿ, ಚಿದಾನಂದ ಮುರಬೈಲು ಕಲ್ಲಡ್ಕ, ಸನತ್ ಕುಮಾರ್ ರೈ, ಹಿರಣ್ಮಯೀ, ಜಿನರಾಜ್ ಕೋಟ್ಯಾನ್, ಅರವಿಂದ ರೈ ,ನಾಗೇಶ್ ಭಂಡಾರಿ. ಆನಂದ ಶಂಬೂರು, ಪ್ರಭಾಕರ ಶೆಟ್ಟಿ ಬೈದರಡ್ಕ,ಯತೀಶ್ ಮೂಳಿಕೊಡಂಗೆ, ಕೌಶಿಲ್ ಶೆಟ್ಟಿ ಬಾಳಿಕೆ, ಜಯಶ್ರೀ ಕಲ್ಲಡ್ಕ ಮಹಾಬಲ ಸಾಲಿಯನ್, ಶೇಖರ್ ಕೊಟ್ಟಾರಿ ದಾಮೋದರ ಪೂಜಾರಿ, ರಾಜೇಶ್ ಕೊಟ್ಟಾರಿ,ಅಮಿತ್ ಕಲ್ಲಡ್ಕ. ನವೀನ್ ಕುದ್ರೆಬೆಟ್ಟು ನವೀನ್ ಕೊಟ್ಟಾರಿ, ವಿಕ್ರಂ ಕಲ್ಲಡ್ಕ, ಜಗನ್ನಾಥ ನರಹರಿನಗರ, ಕೇಶವ ಮುರಬೈಲ್, ಸುನಿಲ್ ಗೋಳ್ತಮಜಲು, ಬೇಬಿ ನೆಟ್ಲ, ವಾಣಿ ಪ್ರದೀಪ್, ವಾಣಿ ಸಂದೀಪ್, ಲಕ್ಷ್ಮಿ ಪ್ರಭು, ಸುಷ್ಮಾ, ಪವಿತ್ರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು
ಮೋನಪ್ಪ ದೇವಸ್ಯ ಧನ್ಯವಾದ ಸಮರ್ಪಿಸಿದರು.
Advertisement







