Advertisement
ಬಂಟ್ವಾಳ : ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 19 ವರ್ಷ ಸರಕಾರಿ ಸೇವೆ ಸಲ್ಲಿಸಿ ಇದೀಗ ಬಂಟ್ವಾಳ ಲೋಕೋಪಯೋಗಿ ಉಪವಿಭಾಗದಲ್ಲಿ ನಿವೃತ್ತಿ ಹೊಂದಿರುವ ಸಹಾಯಕ ಇಂಜಿನಿಯರ್ ಅಮೃತ್ಕುಮಾರ್ ಸಿ.ಆರ್ ರವರ ಬೀಳ್ಕೊಡುಗೆ ಸಮಾರಂಭವು ಬಂಟ್ವಾಳದ ಲೋಕೋಪಯೋಗಿ ಉಪವಿಭಾಗದ ಸಭಾಂಣದಲ್ಲಿ ಜರಗಿತು.
ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೈಪ್ರಕಾಶ್ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿ.ಆರ್.ಇ.ಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರನಾಥ ಸಾಲಿಯಾನ್, ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಸಹಾಯಕಕಾರ್ಯ ನಿರ್ವಾಹಕ ಅಭಿಯಂತರರಾದ ಜಿ.ಕೆ.ನಾಕ್, ಸಹಾಯಕ ಅಭಿಯಂತರುಗಳಾದ ಪ್ರೀತಂ, ಮನೋಜ್, ವಿವೇಕಾನಂದರೆಡ್ಡಿ , ಅಮೃತ್ಕುಮಾರ್ರ ಪತ್ನಿ ಕಲೈವಾಣಿ , ಪಿ.ಆರ್.ಇ.ಡಿ ಉಪವಿಭಾಗ ಅಭಿಯಂತರರಾದ ಕೃಷ್ಣ, ಜಗದೀಶ, ಕುಶಕುಮಾರ್, ನಾಗೇಶ್, ಲೋಕೋಪಯೋಗಿ ಕಚೇರಿ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.
ಅರುಣ್ಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮನೋಜ್ ವಂದಿಸಿದರು.
Advertisement