
ಬಂಟ್ವಾಳ: ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ನಡೆದು 32 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ಕರಾವಳಿ ಜಿಲ್ಲೆಗೆ ಘೋಷಣೆಯಾಗಿದ್ದರೂ ಕೂಡ ಇವರೆಗೆ ಒಂದು ಕೋಟಿ ರೂಪಾಯಿಯ ಡಿಪಿಆರ್ ಕೂಡ ಆಗಿಲ್ಲ ಇದು ರಾಜ್ಯ ಸರ್ಕಾರ ಜನತೆಯನ್ನು ವಂಚಿಸುವ ಹುನ್ನಾರ ವೆಂದು
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ದಿನೇಶ್ ಅಮ್ಟೂರು ಆರೋಪಿಸಿದರು
ಬಿಜೆಪಿ ತುಂಬಾ ಶಕ್ತಿ ಕೇಂದ್ರದ ವತಿಯಿಂದ ತುಂಬೆ ಜಂಕ್ಷನ್ ನಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ನಮ್ಮ ಹಕ್ಕು ನಮಗೆ ನೀಡಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಯಾಗದೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತಿಲ್ಲ. ಇದರಿಂದಾಗಿ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪಂಚಾಯತಿ ಸದಸ್ಯರು ಅಸಹಾಯಕರಾಗಿದ್ದಾರೆ. ಮೊದಲು 5 ರಿಂದ 25 ಸೆಂಟ್ಸ್ ವರೆಗೆ ಪಂಚಾಯತಿನಲ್ಲೇ ಏಕ ವಿನ್ಯಾಸ ನಕ್ಷೆ ಕೊಡುತಿದ್ದರು. ಈಗ ರಾಜ್ಯ ಸರಕಾರ ಹಣ ಮಾಡುವ ದುರುದ್ದೇಶದಿಂದ ಅದನ್ನು ನಗರ ಯೋಜನಾ ಪ್ರಾಧಿಕಾರಕ್ಕೆ ವರ್ಗಯಿಸಿದೆ. ಜನರಿಗೆ ಮಶಾಸನಗಳು ಸಿಗುತ್ತಿಲ, ಗ್ರಹಲಕ್ಷ್ಮಿಯ ಹಣ ಬರುತಿಲ್ಲ, ಹಕ್ಕು ಪತ್ರಗಳು ಸಿಗುತಿಲ್ಲ ಚುನಾವಣೆಯ ಸಂದರ್ಭ ಹೇಳಿದ ಭರವಸೆಗಳು ಸುಳ್ಳಾಗಿವೆ. ಇದೊಂದು ನೆನೆಗುದಿಗೆ ಬಿದ್ದ ಸರಕಾರ ಎಂದು ಟೀಕಿಸಿದರು.
ಹಾಲಿನ ದರವನ್ನು ಏರಿಕೆಯಿಂದ ಜನಸಾಮನ್ಯರಿಗೆ ತೊಂದರಾಯಾಗಿದೆ,ಬಸ್ಸಿಗೆ ಡೀಸೆಲ್ ಹಾಕಲು ಹಣವಿಲ್ಲ ಎಂದು ಸ್ವತ ಮುಖ್ಯಮಂತ್ರಿ ಅವರೇ ಅಸಹಾಯಕತೆ ತೋಡಿಕೊಂಡಿರುವ ವಿಡಿಯೋಗಳು ವೈರಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ದಿನೇಶ್ ಅಮ್ಟೂರು ಈ ಬಗ್ಗೆ ಜನರು ಗಂಭೀರ ವಾಗಿ ಆಲೋಸಬೇಕಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿ. ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ ಪುದು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವು , ಮಂಗಳೂರು ವಿಧಾನಸಭಾ ಕ್ಷೇತ್ರ ಓಬಿಸಿ ಮೋರ್ಚಾ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಶಕ್ತಿಕೇಂದ್ರದ ಕಾರ್ಯದರ್ಶಿ ರೂಪೇಶ್ ಜ್ಯೋತಿಗುಡ್ಡೆ, ಎಸ್ ಸಿ ಮೋರ್ಚದ ಜಿಲ್ಲಾ ಅಧ್ಯಕ್ಷ ವಿಠಲ ಸಾಲಿಯಾನ್ ಕುಮ್ದೇಲು, ಪುದುಪಂಚಾಯತಿ ಸದಸ್ಯೆ ವಿದ್ಯಾ ತುಂಬೆ ಪಂಚಾಯತಿ ಸದಸ್ಯರಾದ ಅರುಣ್ ಕುಮಾರ್, ಕಿಶೋರ್ ರಾಮಲ್ ಕಟ್ಟೆ, ಹೇಮಲತಾ ಜಿ. ಪೂಜಾರಿ, ತುಂಬ ಶಕ್ತಿ ಕೇಂದ್ರ ಪ್ರಮುಖ್ ಸುಶಾಂತ್ ಆಚಾರ್ಯ, ದಿನೇಶ್ ಶೆಟ್ಟಿ ಕೊಟ್ಟಿಂಜ, ಮನೋಜ್ ಆಚಾರ್ಯ ನಾಣ್ಯ ಪಕ್ಷದ ಹಿರಿಯರಾದ ಲಿಂಗಪ್ಪ ಕುಲಾಲ್, ಜಯರಾಮ ಮಜಿ, ಶಿವರಾಮ ಮಜಿ, ಪುರುಷೋತ್ತಮ ಗಟ್ಟಿ, ಪ್ರಕಾಶ್ ಆಚಾರ್ಯ ರಾಮಲಕಟ್ಟೆ, ಆರ್.ಎಸ್. ಜಯ ರಾಮಲಕಟ್ಟೆ , ರಾಜು ಗಾಣದಲಚ್ಚಿಲ್, ಶ್ರೀನಿವಾಸ್ ಪರ್ಲಕ್ಕೆ ಸದಾನಂದ ಕುಲಾಲ್ ಇತರರು ಉಪಸ್ಥಿತರಿದ್ದರು.
ಬಳಿಕ ತುಂಬೆ ಪಂಚಾಯತಿ ತೆರಳಿ ಪಿಡಿಒ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
Advertisement







