ಬಂಟ್ವಾಳ: ನನ್ನ ಅಧಿಕಾರವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಶಾಂತಿ ನೆಲೆಸಿತ್ತು, ಆದರೆ ಧರ್ಮಾಧರಿತ ಹತ್ಯೆ ನಡೆಸಿ ಅಪಪ್ರಚಾರ ಮಾಡಲಾಗಿತ್ತು. ಕೊಲೆ ಆರೊಪಿಗಳು ಯಾರೂ ಕಾಂಗ್ರೆಸ್ ಕಾರ್ಯಕರ್ತರಲ್ಲ, ಇಲ್ಲಿನ ಅಶಾಂತಿಗೆ ಮತೀಯವಾದ ಪಕ್ಷಗಳೇ ಕಾರಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಬಂಟ್ವಾಳ ಪ್ರಜಾಧ್ವನಿ ರಥಯಾತ್ರೆಯ ಪ್ರಯುಕ್ತ ಬಡಕಬೈಲು ಜಂಕ್ಷನ್ ನಲ್ಲಿ ಶುಕ್ರವಾರ ಸಂಜೆ ನಡೆದ ಮೊದಲ ದಿನದ ಸಮಾರೋಪ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ಲಾಭಕ್ಕಾಗಿ ನೀಚ ಕೆಲಸ ಮಾಡುವವರಿದ್ದಾರೆ, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಾವಿರ ಕೋಟಿಯ ಕೆಲಸ ಮಾಡಿದ್ದಾನೆ, ಅದರ ಲೆಕ್ಕ ಕೇಳುತ್ತಾರೆ, ಮೊದಲು 2 ಸಾವಿರ ಕೋಟಿಯ ಲೆಕ್ಕವನ್ನು ಕೊಡಲಿ ಎಂದು ಸವಾಲು ಹಾಕಿದರು. ಸುಳ್ಳು ಆರೋಪ ಮಾಡಿದವರಿಗೆ, ಅಪಪ್ರಚಾರ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು, ನಾನು ತಪ್ಪು ಮಾಡಿಲ್ಲ, ಯಾವುದೇ ಆಮಿಷಾ ಆಕಾಂಕ್ಷೆಗಳಿಗೆ ಬಲಿಯಾಗದೆ ಪ್ರಾಮಾಣಿಕತೆಯಿಂದ ಬದುಕುತ್ತುದ್ದೇನ ಎಂದರು.
ವಿಧಾನಪರಿಷತ್ತ್ ಸದಸ್ಯ ಮಂಜುನಾಥ ಭಂಡಾರಿ ಪ್ರಧಾನ ಭಾಷಣ ಮಾಡಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಈ ಮೂರು ಕೊಡುಗೆಯನ್ನು ಕಾಂಗ್ರೇಸ್ ಪ್ರಕಟಿಸಿದ್ದು ಪ್ರತೀ ಮನೆಗೆ ವಾರ್ಷಿಕ 55 ಸಾವಿರ ರೂಪಾಯಿಯ ನೆರವು ನಿಡಲಿದೆ ಎಂದರು. ಕಾಂಗ್ರೆಸ್ ಪಕ್ಷ ಅಭಿವೃದ್ದಿ ನೋಡುತ್ತಿದ್ಸರೆ ಬಿಜೆಪಿ ಭಾವನಾತ್ಮಕ ವಿಚಾರಗಳಿಗೆ ಆದ್ಯತೆ ನೀಡುತ್ತಿದೆ. ಕಾಂಗ್ರೆಸ್ ಜೊತೆಯಾಗಿ ಬದುಕಲು ಕಲಿಸಿದರೆ, ಬಿಜೆಪಿ ವಿಭಜಿಸುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ಅಭಿವೃದ್ದಿ ಮಾಡಿದರೆ ಅಭಿವೃದ್ದಿಯನ್ನು ಕುಂಠಿತಗೊಳಿಸುವ ಪ್ರಯತ್ನವಬ್ನಜ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಎಡ್ತೂರು ರಾಜೀವ ಶೆಟ್ಟಿ ರೈ ಅವರ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು. ಈ ಸಂದರ್ಭ ರಥಯಾತ್ರೆಯ ಸಂಚಾಲಕ ಪಿಯೂಸ್ ಎಲ್. ರೊಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಕ್ಷ ಪ್ರಮುಖರಾದ ಪದ್ಮಶೇಖರ ಜೈನ್, ಎಂ. ಎಸ್. ಮಹಮ್ಮದ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಜಯಂತಿ ಪೂಜಾರಿ, ಇಂಟಕ್ ಜಿಲ್ಲಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಅಮ್ಮುಂಜೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪ್ರೇಮಲತಾ, ವೀಣಾ ಆಚಾರ್ಯ,
ಜಾಸ್ಫಿನ್ ಡಿಸೋಜಾ, ಅಬ್ಬಾಸ್ ಅಲಿ, ವಾಸು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಅಮ್ಮುಂಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು,
ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ರಥಯಾತ್ರೆ ಬಡಗಬೆಳ್ಳೂರು, ಕರಿಯಂಗಳ, ಅಮ್ಮುಂಜೆ ಗ್ರಾಮಗಳಲ್ಲಿ ಸಂಚರಿಸಿತ್ತು.