
ಬಂಟ್ವಾಳ:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಸೈಂಟ್ ಸೆಭೆಸ್ಟಿಯನ್ ಸಭಾಂಗಣದಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಮಹಾಸಭೆಯಲ್ಲಿ ಬಂಟ್ವಾಳ ವಲಯಕ್ಕೆ ಅತ್ಯುತ್ತಮ ವಲಯ ಪ್ರಶಸ್ತಿ ದೊರಕಿದ್ದು ವಲಯಾಧ್ಯಕ್ಷ ರಾಜೇಂದ್ರ ಪ್ರಶಸ್ತಿ ಸ್ವೀಕರಿಸಿದರು.
ಈ ಸಂಧರ್ಭ ದಲ್ಲಿ ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘ ದ ಅಧ್ಯಕ್ಷ ಎಚ್ .ಎಸ್. ನಾಗೇಶ್, ಜಿಲ್ಲಾ ಧ್ಯಕ್ಷ ನವೀನ್ ರೈ, ಜಿಲ್ಲಾ ಸಂಚಾಲಕ ಗೋಪಾಲ್ ಸುಳ್ಯ, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಏನ್. ಬಂಟ್ವಾಳ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Advertisement







