
ಬಂಟ್ವಾಳ: ತುಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಧಾರ್ಮಿಕ ನಂಬಿಕೆಯೊಂದಿಗೆ ನಡೆಸುತ್ತಿದ್ದ ಸಾಂಪ್ರದಾಯಿಕ ಕಂಬಳವು ಪ್ರಸಕ್ತ ಜಗತ್ತಿನಾದ್ಯಂತ ಪಸರಿಸಿದೆ ಎಂದು ಕುಡುಂಬೂರುಗುತ್ತು ಕನಿಲ ಕ್ಷೇತ್ರದ ಗುತ್ತಿನಾರ್ ಜಯರಾಮ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ವತಿಯಿಂದ ಶನಿವಾರ ಆರಂಭಗೊಂಡ 4ನೇ ವರ್ಷದ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿದ್ಧಕಟ್ಟೆ ವೈದ್ಯ ಡಾ. ಸುದೀಪ್ ಕುಮಾರ್ ಜೈನ್ ಕಂಬಳ ಕರೆ ಉದ್ಘಾಟಿಸಿ ಶುಭ ಹಾರೈಸಿದರು. ಸಿದ್ಧಕಟ್ಟೆ ವೈದ್ಯ ಡಾ. ಕೃಷ್ಣಮೂರ್ತಿ ಭಟ್ ಕಂಬಳ ಧ್ವಜಾರೋಹಣ ನೆರವೇರಿಸಿದರು. ಹಿರಿಯ ವೈದ್ಯ ಡಾ. ಪ್ರಭಾಚಂದ್ರ ಜೈನ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಸಿದ್ದಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಪಿ ಡಿ ಒ ಗಣೇಶ ಶೆಟ್ಟಿ ಶುಭ ಹಾರೈಸಿದರು.

ಸಿದ್ದಕಟ್ಟೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮೈಕಲ್ ಡಿಕೋಸ್ತ, ತಹಸೀಲ್ದಾರ್ ಜಿ. ಮಂಜುನಾಥ್, ಪ್ರಮುಖರಾದ ಜಯ ಶೆಟ್ಟಿ ಕುಡುಂಬೂರು, ಯೋಗೀಶ್ ಶೆಟ್ಟಿ ಕುಡುಂಬೂರು, ಪ್ರಜ್ವಲ್ ಶೆಟ್ಟಿ ವಾಮದಪದವು, ಕೆ. ಪರಮೇಶ್ವರ ಪೂಜಾರಿ ರಾಯಿ, ವೇಣುಗೋಪಾಲ ಶೆಟ್ಟಿ ಮಾವಿನಕಟ್ಟೆ, ಉದ್ಯಮಿ ರಕ್ಷಣ್ ಮೇಲಾಂಟ,
ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಂಬಳ ಸಮಿತಿ ಗೌರವ ಸಲಹೆಗಾರ ಕಿರಣ್ ಕುಮಾರ್ ಮಂಜಿಲ, ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಲ್ಲಾಪು,
ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಮಧುಸೂದನ್ ಸಾಲ್ಯಾನ್ ಕಲಾಯಿದಡ್ಡ, ಉಮೇಶ್ ಶೆಟ್ಟಿ ಕೊನೆರೊಟ್ಟು, ಸಂದೇಶ್ ಶೆಟ್ಟಿ ಪೊಡುಂಬ, ನವೀನ್ ಹೆಗ್ಡೆ ಮಣಿಪಾಲ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಚಂದ್ರಶೇಖರ ಪೂಜಾರಿ ಕೊಡಂಗೆ, ಜನಾರ್ದನ ಬಂಗೇರ ತಿಮರಡ್ಕ, ಉಮೇಶ್ ಹಿಂಗಾಣಿ, ಅವನ್ ಕುಮಾರ್ ಜೈನ್ ಪಣೆಬೆಟ್ಟು, ಸ್ಥಳದಾನಿ
ಓಬಯ್ಯ ಪೂಜಾರಿ ಕೊಡಂಗೆ, ಲಲಿತಾ ಕೊರಗಪ್ಪ ಪೂಜಾರಿ
ಮತ್ತಿತರರು ಭಾಗವಹಿಸಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ‘ಬಂಟ್ವಾಳ ತಾಲೂಕಿನಲ್ಲಿ ಪ್ರಸಕ್ತ ಕಂಬಳ ಋತುವಿನ ಪ್ರಥಮ ಕಂಬಳ ಇದಾಗಿದ್ದು, ಕೇವಲ 4 ವರ್ಷಗಳ ಅವಧಿಯಲ್ಲಿ ಒಟ್ಟು 7 ಕಂಬಳ ಯಶಸ್ವಿಯಾಗಿ ನಡೆಸಲು ಕಂಬಳ ಸಮಿತಿ ಮತ್ತು ಸ್ಥಳದಾನಿಗಳು ಸಹಿತ ಎಲ್ಲರ ಪರಿಶ್ರಮ ಇದೆ ‘ ಎಂದರು.
ಸಮಿತಿ ಗೌರವ ಸಲಹೆಗಾರ ವಸಂತ ಶೆಟ್ಟಿ ಕೇದಗೆ ವಂದಿಸಿ, ನೋಟರಿ ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತು ಕಾರ್ಯಕ್ರಮ ನಿರೂಪಿಸಿದರು.
ಗೌರವ ಸಲಹೆಗಾರ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತು ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ವತಿಯಿಂದ 4ನೇ ವರ್ಷದ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
Advertisement







