
ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಸಿರಿಮುಡಿ ಕಾಂಪ್ಲೆಕ್ಸ್ ನಲ್ಲಿ ಸ್ಟೈಲ್ ಲ್ಯಾಬ್ ಬ್ಯೂಟಿ ಪಾರ್ಲರ್ ಶುಭಾರಂಭಗೊಂಡಿತು.

ವೈದ್ಯೆ ಡಾ. ತ್ರಿವೇಣಿ ಬ್ಯೂಟಿ ಪಾರ್ಲರ್ ಉದ್ಘಾಟಿಸಿದರು. ನಿವೃತ್ತ ಬಿಎಸ್ ಎಫ್ ಯೋಧ ಚಂದಪ್ಪ ಮೂಲ್ಯ ದೀಪ ಪ್ರಜ್ವಲಿಸಿದರು. ಕರಾವಳಿ ಕುಲಾಲ ಕುಂಬಾರ ಯುವವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಜಯಗಣೇಶ್ ಬಂಗೇರ ಮತ್ತಿತರರು ಗಣ್ಯರು ಭಾಗವಹಿಸಿದ್ದರು.

ಸ್ಟೈಲ್ ಲ್ಯಾಬ್ ಬ್ಯೂಟಿ ಪಾರ್ಲರ್ ಮಾಲಕಿ ಶೋಭಾ ಜಯಪ್ರಕಾಶ್ ಕುಡುಮುನ್ನೂರು ಸ್ವಾಗತಿಸಿದರು, ಜಯಪ್ರಕಾಶ್ ಬಂಗೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


Advertisement







