

ಬಂಟ್ಚಾಳ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ಆಶ್ರಯದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ 18ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 6 ಜೋಡಿ ವಧು ವರರು ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮಸ್ಥಳ ಕ್ಷೇತ್ರವನ್ನು ಹೊರತು ಪಡಿಸಿ ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ಜೋಡಿಗೆ ಮದುವೆ ಭಾಗ್ಯ ಕರುಣಿಸಿದ ಹೆಗ್ಗಳಿಕೆ ತುಂಗಪ್ಪ ಬಂಗೇರ ಅವರಿಗೆ ಸಲ್ಲುತ್ತದೆ.


ಐನ್ನೂರಕ್ಕಿಂತಲೂ ಅಧಿಕ ಜೋಡಿಗೆ ಮದುವೆ ಮಾಡಿರುವುದು ಶ್ರೇಷ್ಠ ಕೆಲಸ, ಇದನ್ನು ನಿರಂತರವಾಗಿ ಮುಂದುವರೆಸಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ವಿಶೇಷ ಆಹ್ವಾನಿತರಾದ ರವಿಶಂಕರ್ ಶೆಟ್ಟಿ ಬಡಾಜೆಗುತ್ತು ಉದ್ಘಾಟಿಸಿದರು.


ಅವರು ಮಾತನಾಡಿ ಆರ್ಥಿಕವಾಗಿ ಸ್ಥಿತಿವಂತನಲ್ಲದಿದ್ದರೂ ಪ್ರತೀ ವರ್ಷ ನೂತನ ಜೋಡಿಗಳಿಗೆ ಮದುವೆ ಮಾಡಿಸುವ ತುಂಗಪ್ಪ ಬಂಗೇರ ಅವರ ಸೇವಾ ಕಾರ್ಯ ಆದರ್ಶವಾದುದು ಎಂದು ತಿಳಿಸಿದರು. ದೈಜಿವರ್ಲ್ಡ್ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಶುಭ ಹಾರೈಸಿದರು.ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ರವಿಶಂಕರ್ ಶೆಟ್ಟಿ, ದಿವಾಕರ ದಾಸ್ ಕಾವಳಕಟ್ಟೆ, ಸಂತೋಷ್ ಎಸ್. ಸನಿಲ್, ಮೊಹಮ್ಮದ್ ರಫೀಕ್, ಸುಧೀರ್ ಪೂಜಾರಿಯವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಸಹಕಾರ ಶಿರೋಮಣಿ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಪ್ರಭು ಅವರನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಉದ್ಯಮಿಗಳಾದ ಹರೀಂದ್ರ ಪೈಮೋಹನ್ ಶೆಟ್ಟಿ ನರ್ವಾಲ್ ದಡ್ಡ, ಬಡಗಕಜೆಕಾರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಾರದಾ, ಪಿಡಿಓ ಗೀತಾ ಹೆಗ್ಡೆಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್,ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮತ್ತಿತರರು ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಅಬ್ದುಲ್ ಹಮೀದ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪಿ. ಪೂಂಜಾಲಕಟ್ಟೆ ಭಾಗವಹಿಸಿದ್ದರು. ಪ್ರಭಾಕರ ಪಿ.ಎಂ ಸ್ವಾಗತಿಸಿದರು. ವೇ.ಮೂರ್ತಿ ಕೃಷ್ಣ ಭಟ್ ಕಾರ್ಕಳ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.


Advertisement







