ಬಂಟ್ವಾಳ: ಶರ್ವಾ
ಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ,ನಿ. ಬಿ.ಸಿ.ರೋಡ್ ಇದರ ಪ್ರಥಮ ವಾರ್ಷಿಕ ಕಾರ್ಯಕ್ರಮ ಮಾರ್ಚ್ 6 ಶುಕ್ರವಾರದಂದು ಬಿ.ಸಿ.ರೋಡಿನ, ವಿವೇಕನಗರದ ಶಕ್ತಿ ಕಂಪೌಂಡ್ ನಲ್ಲಿ ನೆರವೇರಿತು.
ಬಾಲಕೃಷ್ಣ ಪ್ರಭು ಮತ್ತು ಜಯಲಕ್ಷ್ಮಿ ಪ್ರಭು ದೀಪ ಪ್ರಜ್ವಲಿಸಿದರು. ಬಳಿಕ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು.

ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ರೋಹಿಣಿ ಉದಯ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ. ಕ ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ ಬಂಟ್ವಾಳ. ಇದರ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮತ್ತು ಅಪೂರ್ವ ಜ್ಯುವೆಲ್ಲರ್ಸ್ ಬಿ.ಸಿ.ರೋಡ್, ಇದರ ಮಾಲೀಕರಾದ ಸುನೀಲ್ ಬಿ. ಭಾಗವಹಿಸಿ ಶುಭ ಹಾರೈಸಿದರು. ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಉದಯ ವೆಂಕಟೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ವರ್ಷದಲ್ಲಿ ಸಹಕಾರಿಯ ಅಭಿವೃದ್ಧಿಯ ಬಗ್ಗೆ ವಿವರಿಸಿದರು. ಒಂದು ವರ್ಷದಲ್ಲಿ ಸಹಕಾರಿಯ ಅಭಿವೃದ್ಧಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಹಕಾರಿಯ ನಿರ್ದೇಶಕರಾದ ಜಯಾನಂದ ಆಚಾರ್ಯ, ಪರಮೇಶ್ವರ ಮೊಯ್ಲಿ, ಪ್ರಜ್ವಲ್ ಪ್ರಸಾದ್, ಜಯಲಕ್ಷ್ಮಿ , ಬಿಂದು ಕುಡ್ವ, ಅನಿತಾ ನಾಯಕ್, ದಿವ್ಯಾ ಸಂಜಯ್ , ಶ್ರದ್ಧಾ ಕಲ್ಲಡ್ಕ, ಉಪಸ್ಥಿತರಿದ್ದರು. ಶ್ರೀ ವಿಘ್ನೇಶ್ ಸ್ವಾಗತಿಸಿದರು, ಅನಿತಾ ನಾಯಕ್ ವಂದಿಸಿದರು.


Advertisement







