
ಬಂಟ್ವಾಳ: ಲಯನ್ಸ್ ಮತ್ತು ಲಿಯೋ ಕ್ಲಬ್ ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಅಮ್ಟೂರು ಇಲ್ಲಿಗೆ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ ಶೆಣೈ
ಅವರ ಅಧಿಕೃತ ಭೇಟಿ ಕಾರ್ಯಕ್ರಮ ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ ಶೆಣೈ ಮಾತನಾಡಿ ಲಯನ್ಸ್ ಸಂಸ್ಥೆ ಅಮೇರಿಕಾದಲ್ಲಿ ಹುಟ್ಟಿದರೂ ಇಂದು ಭಾರತದಲ್ಲಿ ಅದರ ಸದಸ್ಯತನ ಹೆಚ್ಚಾಗುತ್ತಿದೆ. ಜಾಗತಿಕ ಸಂಸ್ಥೆಯಲ್ಲಿ ಭಾರತದ ಸದಸ್ಯತನ ನಂಬರ್ 1 ಆಗಿರುವುದು ನಮೆಗೆಲ್ಲರಿಗೂ ಹೆಮ್ಮೆ ಎಂದರು. ಹಿರಿಯ ಕ್ಲಬ್ ಆಗಿರುವ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರಿನಿಂದ
ಜಿಲ್ಲಾ ಗವರ್ನರ್ ಅಭ್ಯರ್ಥಿ ಮೂಡಿ ಬರಲಿ ಎಂದು ಆಶಿಸಿದರು. ಅಮ್ಟೂರು ಲಯನ್ಸ್ ಕ್ಲಬ್ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆ ನೀಡಿ ಲಯನ್ಸ್ ಜಿಲ್ಲೆಗೆ ಉತ್ತಮ ಹೆಸರು ತಂದಿದೆ ಎಂದರು.


ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರಿನ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಹಾಗೂ ಅಮ್ಟೂರು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಫ್ರಾನ್ಸಿಸ್ ಪ್ರವೀಣ್ ಕ್ರಾಸ್ತ ವರದಿ ವಾಚಿಸಿದರು. ಈ ಸಂದರ್ಭ ಸೇವಾ ಕಾರ್ಯಕ್ರಮವಾಗಿ
ಶತಮಾನೋತ್ಸವ ಆಚರಿಸುವ ಅಮ್ಟೂರು ಕೆದ್ಲ ಶಾಲೆಗೆ ಆರ್ಥಿಕ ನೆರವು ನೀಡಲಾಯಿತು.
ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸುಶೀಲ, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಚೈತನ್ಯ ಅವರನ್ನು ಅಭಿನಂದಿಸಲಾಯಿತು.
ಸೇವಾ ಚಟುವಟಿಕೆಯಾಗಿ ಎರಡು ಬಸ್ಸು ತಂಗುದಾಣ ನವೀಕರಣ ಹಾಗೂ ಬ್ಯಾರಿಕೇಡ್ ಅಳವಡಿಕೆಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಅಮ್ಟೂರು ಲಯನ್ಸ್ ಕ್ಲಬ್ ನ ಸೇವಾ ಕಾರ್ಯಕ್ರಮವಾಗಿ ಇನಾಸ್ ಅಲ್ಮಿಡಾ ಅವರಿಗೆ ಆರ್ಥಿಕ ನೆರವು ಹಾಗೂ
ಶಹಿದಾ ಅವರ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಯಿತು. ಕೆಎಸ್ಆರ್ ಟಿಸಿ ಚಾಲಕ ಮಾರ್ಟಿಸ್, ಕೆಟರಿಂಗ್ ಉದ್ಯಮಿ ಎಡ್ವಿನ್ ಸುವಾರಿಸ್, ಜೋಕಿಂ ಪಸನ್ನ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಎರಡೂ ಕ್ಲಬ್ ಗಳಿಗೂ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು. ಬಳಿಕ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರನ್ನು ಸನ್ಮಾನಿಸಲಾಯಿತು.


ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಚಂದ್ರೇಗೌಡ,ಶುಭಾಶಂಸನೆಗೈದು ಹೊಸ ಸದಸ್ಯರನ್ನು ಘಟಕಕ್ಕೆ ಸೇರಿಸುವ ಮೂಲಕ ಕ್ಲಬ್ ನ್ನು ಸಶಕ್ತಗೊಳಿಸುವಂತೆ ತಿಳಿಸಿದರು.
ಜಿಲ್ಲಾ ಸಂಪುಟ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ದ್ವಿತೀಯ ರಾಜ್ಯಪಾಲ ಗೋವರ್ಧನ್ ಶೆಟ್ಟಿ, ವಲಯಾಧ್ಯಕ್ಷರಾದ ರಾಧಕೃಷ್ಣ ಬಂಟ್ಚಾಳ, ನೋಯಲ್ ಲೋಬೋ, ಎರಡೂ ಕ್ಲಬ್ ನ ಕೋಶಾಧಿಕಾರಿಗಳಾದ ನಿಶ್ಚಲ್ ಶೆಟ್ಟಿ ಕಲ್ಲಾಡಿ ಹಾಗೂ ಅಲ್ವಿನ್ ಕುಟಿನ್ನಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಅಧ್ಯಕ್ಷ
ಉಮಾನಾಥ ರೈ ಮೇರಾವು ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಮಾತನಾಡಿ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಸದಸ್ಯರ ಸಹಕಾರದಿಂದಿಗೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದರು.
ಅಮ್ಟೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಲಿಯಸ್ ಡಿಸೋಜಾ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
Advertisement







