ಬಂಟ್ವಾಳ: ಇಲ್ಲಿನ ಮೊಡಂಕಾಪು ಚೆನ್ನರಪಾಲು ಎಂಬಲ್ಲಿ ಮಂಗಳವಾರ ರಾತ್ರಿ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ವೇಳೆ ದೇವಿಯ ಶಿರದಲ್ಲಿ ಹಕ್ಕಿಯಿಂದು ಕುಳಿತು ಅಚ್ಚರಿ ಮೂಡಿಸಿದೆ.
ಇಲ್ಲಿನ ಡೊಂಬಯ್ಯ ಕುಲಾಲ್ ಸಹೋದರರು ವತಿಯಿಂದ ಕಟೀಲು 6ನೇ ಮೇಳದ ಯಕ್ಷಗಾನ ನಡೆದಿತ್ತು. ರಾತ್ರಿ 11 ಗಂಟೆಯ ವೇಳೆಗೆ ಶ್ರೀ ದೇವಿ ಕದಂಬ ವನದಲ್ಲಿ ಉಯ್ಯಾಲೆಯಲ್ಲಿ ತೂಗಾಡುವ ಸಂದರ್ಭ ಎಲ್ಲಿಂದಲೋ ಹಾರಿ ಬಂದ ಹಕ್ಕಿಯೊಂದು ಶ್ರೀ ದೇವಿ ವೇಷಧಾರಿಯ ಮಡಿಲಲ್ಲಿ ಕುಳಿತು ಅಚ್ಚರಿ ಮೂಡಿಸಿತು. ಬಳಿಕ ಅಲ್ಲಿಂದ ನಿಧಾನವಾಗಿ ಮೇಲೆರುತ್ತಾ ಶಿರದಲ್ಲಿ ಕುಳಿತಿದ್ದರೂ ಶ್ರೀ ದೇವಿ ಪಾತ್ರದಾರಿ ನಗು ನಗುತ್ತಲೆ ಹಕ್ಕಿಯ ಚಲನೆಯನ್ನು ಗಮನಿಸುತ್ತಿದ್ದರು. ಇತ್ತ ಯಕ್ಷಗಾನ ನೋಡಲು ಬಂದ ಪ್ರೇಕ್ಷಕರು ಕೂಡ ದೇವಿಯ ಶಿರ ದಲ್ಲಿ ನಿರ್ಭಯವಾಗಿ ಕುಳಿತಿರುವ ಹಕ್ಕಿಯನ್ನು ನೋಡಿ ಸಂಭ್ರಮ ಪಟ್ಟರು.
Advertisement







