
ಬಂಟ್ವಾಳ: ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿ ಝಿ ನ್ಯೂಸ್ ಕನ್ನಡ ಕೊಡಮಾಡುವ ರಾಜ್ಯಮಟ್ಟದ “ಕರ್ನಾಟಕ ಐಡಲ್ ಅವಾರ್ಡ್- 2026 ಪ್ರಶಸ್ತಿಯನ್ನು ಹೊಟೇಲ್ ಉದ್ಯಮಿ, ಸಮಾಜ ಸೇವಕ ಸದಾನಂದ ಬಿ. ಬಂಗೇರ ಮೊಡಂಕಾಪು ಅವರಿಗೆ ಪ್ರದಾನ ಮಾಡಲಾಯಿತು.
ಉದ್ಯಮ ಕ್ಷೇತ್ರದ ಸಾಧನೆ ಹಾಗೂ ಸಮಾಜಮುಖಿ ಸೇವೆಗಾಗಿ ಬೆಂಗಳೂರಿನ ದಿ ಲಲಿತ್ ಅಶೋಕ್ ನಲ್ಲಿ ಬುಧವಾರ ಸಂಜೆ ನಡೆದ ಅದ್ದೂರಿ ಸಮಾರಂಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಸದಾನಂದ ಬಂಗೇರ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಕಾಡಸಿದ್ದೇಶ್ವರ ಮಠದ ಅಜ್ಜಯ್ಯ ಮಹಾಸ್ವಾಮಿಗಳು, ರಾಜ್ಯ ಅರಣ್ಯ, ಪರಿಸರ ಸಚಿವ ರಾಮಲಿಂಗರೆಡ್ಡಿ, ಆರೋಗ್ಯ ಸಚಿವ ಯು.ಟಿ.ಖಾದರ್,
ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿಇ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಸಂತೋಷ್ ಎಸ್. ಲಾಡ್
ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್, ಚಿತ್ರನಟಿ ಶುಭ ಪೂಂಜ, ಶಾಸಕ ಶೈಲೇಂದ್ರ , ಪ್ರಮುಖರಾದ ಮಾಧವ ಕಿರಣ್
ಲತಾ ಜೈ ಪ್ರಕಾಶ್, ಝೀ ನ್ಯೂಸ್ ಕನ್ನಡ ಸಂಪಾದಕ ಸಂಪಾದಕ ರವಿ ತೇಜಾ ಎಸ್. ಉಪಸ್ಥಿತರಿದ್ದರು.

ಬಿ.ಸಿ.ರೋಡಿನ ಕೈಕಂಬದಲ್ಲಿ ಹೊಟೇಲ್ ಸಾಯಿಲೀಲಾ ಹಾಗೂ ಸಾಯಿರಾಮ್ ಕ್ಯಾಟರಿಂಗ್ ಸರ್ವಿಸ್ ನಡೆಸುತ್ತಿರುವ ಸದಾನಂದ ಬಂಗೇರ ಅವರು ಜೆಸಿಐ ಬಂಟ್ವಾಳ ಸಂಸ್ಥೆಯ ಮೂಲಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಮನೆ ದುರಸ್ತಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು, ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು, ಶಾಲೆ ಕಾಲೇಜುಗಳಿಗೆ ಕಲಿಕೆಗೆ ಪೂರಕವಾಗುವ ವಸ್ತುಗಳ ಕೊಡುಗೆಯನ್ನು ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
Advertisement







