
ಬಂಟ್ವಾಳ: ಸಜೀಪಮೂಡ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛ ಸಜೀಪಮೂಡ ಗ್ರಾಮ ಅಭಿಯಾನಕ್ಕೆ ಶನಿವಾರ ಕಾರಾಜೆ ಜಂಕ್ಷನ್ ಬಳಿ ಚಾಲನೆ ನೀಡಲಾಯಿತು.
ಸಜೀಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮಾತನಾಡಿ ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಗ್ರಾಮಗಳ ಸ್ವಚ್ಛತೆ ಅತ್ಯಗತ್ಯವಾಗಿದ್ದು, ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಗ್ರಾಮ ಸ್ವಚ್ಛತಾ ಅಭಿಯಾನಗಳು ಮಹತ್ವದ ಪಾತ್ರ ವಹಿಸುತ್ತವೆ.
ಸಜೀಪಮೂಡ ಗ್ರಾಮವನ್ನು ಸ್ವಚ್ಛ ಹಾಗೂ ಆರೋಗ್ಯಕರ ಗ್ರಾಮವನ್ನಾಗಿ ರೂಪಿಸುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ಗ್ರಾಮವನ್ನು ಸ್ವಚ್ಛವಾಗಿಡುವ ಕಾರ್ಯದಲ್ಲಿ ಪ್ರತಿಯೊಬ್ಬ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಅವರು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಸಂಜೀವ ಪೂಜಾರಿ ಮಾತನಾಡಿ, ಸಜೀಪಮೂಡ ಗ್ರಾಮ ಅಭಿವೃದ್ಧಿಯ ಹಾದಿಯಲ್ಲಿದೆ. ತಾಲೂಕು ಕೇಂದ್ರಕ್ಕೂ ಸಮೀಪದಲ್ಲಿರುವ ಈ ಗ್ರಾಮವನ್ನು ಸ್ವಚ್ಛವಾಗಿ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಗ್ರಾಮಸ್ಥರು ತನು, ಮನದಿಂದ ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಬೂಡ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ. ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ಪಕ್ಷದ ಪ್ರಮುಖರಾದ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ವಿಶ್ವನಾಥ ಬೆಳ್ಚಾಡ ಕೂಡೂರು, ದೇವಿ ಪ್ರಸಾದ್ ಪೂಂಜ, ಸೀತಾರಾಮ ಶೆಟ್ಟಿ ಕಾಂತಾಡಿ, ಶೋಭಾ ಶೆಟ್ಟಿ, ಫೌಝೀಯಾ, ಸಿದ್ದಿಕ್ ಕೊಳಕೆ, ಹಮೀದ್ ಕೊಳಕೆ, ಕರೀಂ ಬೊಳ್ಳಾಯಿ, ಅಶೋಕ್ ಕೋಮಾಲಿ, ಯೋಗೀಶ್ ಬೆಳ್ಚಾಡ, ಚಂದ್ರಶೇಖರ ಶೆಟ್ಟಿ ನೀಲ್ಯ, ಲಿಂಗಪ್ಪ ಕಾರಾಜೆ, ಪುರುಷೋತ್ತಮ ಕಾರಾಜೆ, ಉದಯ ಕಾರಾಜೆ, ರಮೇಶ್ ಪಣೋಲಿಬೈಲು, ನವೀನ್ ಪಣೋಲಿಬೈಲು, ಅಬೂಬಕ್ಕರ ಬೊಳ್ಳಾಯಿ, ಕರೀಂ ಕಾರಾಜೆ, ಸುಶೀಲ ಕಾರಾಜೆ, ವಿನೋದ್ ಕೋಮಾಲಿ, ನವೀನ್, ಹರೀಧ್ ನಾಯಕ್, ಭೋಜ ಗಟ್ಟಿ ಹಾಗೂ ಮಲಿಕ್ ಕೊಳಕೆ ಉಪಸ್ಥಿತರಿದ್ದರು.
ಹಿಟಾಚಿ, ಹುಲ್ಲು ಕೊಯ್ಯುವ ಯಂತ್ರಗಳನ್ನು ಬಳಸಿ ಚರಂಡಿ ಸ್ಬಚ್ಚತೆ, ರಸ್ತೆ ಇಕ್ಕೆಲಗಳನ್ನು ಸ್ವಚಗೊಳಿಸಲಾಯಿತು.
Advertisement







