
ಮಂಗಳೂರು: ಹ್ಯಾಮರ್ ಥ್ರೋನಲ್ಲಿ ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಖುಷಿ ಸಾಲ್ಯಾನ್ ನೂತನ ದಾಖಲೆ ನಿರ್ಮಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ಯುನಿವರ್ಸಿಟಿ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನಡೆದ 26ನೇ ರಾಜ್ಯ ಮಟ್ಟದ ಅಂತರ್ಕಾಲೇಜು ಅಥ್ಲೆಟಿಕ್ ಮೀಟ್ 2024-25ರಲ್ಲಿ ಹ್ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಗೆದ್ದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಹಮ್ಮದ್ ಹ್ಯಾರೀಸ್ ಅವರಿಂದ ತರಬೇತಿ ಪಡೆಯುತ್ತಿರುವ ಇವರು ಉಮೆಶ್ ಕೆಲಿಂಜ ಹಾಗೂ ಭವಾನಿ ಉಮೇಶ್ ಅವರ ಸುಪುತ್ರಿ
