
ಬಂಟ್ವಾಳ: ಬಿ.ಸಿ.ರೋಡಿನ ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ಆಶಯದಲ್ಲಿ ಸಂಚಯಗಿರಿಯ ಸಂಗೀತ ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ಒದಗಿಸುವ ವಿನೂತನ ಕಾರ್ಯಕ್ರಮ ಸಂಚಯ ಮೆಲೋಡಿಸ್ ಗೆ ಚಾಲನೆ ನೀಡಲಾಯಿತು.
ಕರೋಕೆ ಗಾಯಕ, ಭಾರತೀಯ ಜೀವ ವಿಮಾ ನಿಗಮದ ಬಿ.ಸಿ.ರೋಡು ಶಾಖೆಯ ಆಡಳಿತಾಧಿಕಾರಿ ರವಿ ಕುಮಾರ್ ಹಾಸನ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಸಂಗೀತ ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮ, ಈ ವೇದಿಕೆಯ ಮೂಲಕ ಹೊಸ ಪ್ರತಿಭೆಗಳ ಅನಾವರಣ ಆಗಲಿ ಎಂದು ಶುಭ ಹಾರೈಸಿದರು. ಬಳಿಕೆ ಕರೋಕೆ ಹಾಡು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.
ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಿನ ನಿತ್ಯ ಕೆಲಸದ ಒತ್ತಡದಲ್ಲಿರುವ ನಮಗೆ ಮನೋರಂಜನೆಯನ್ನು ಪಡೆಯಲು ಈ ಕಾರ್ಯಕ್ರಮದಿಂದ ಸಾಧ್ಯವಿದೆ. ಸಂಚಯ ಮೆಲೋಡೀಸ್ ಮೂಲಕ ಸ್ಥಳೀಯ ಪ್ರತಿಭೆಗಳಿಗೂ ವೇದಿಕೆ ಸಿಗಲಿದೆ ಎಂದರು.
ನಾಗರಿಕ ಕ್ರಿಯಾ ಸಮಿತಿಯ ಉಪಾಧ್ಯಕ್ಷೆ ತಾಯಮ್ಮ,
ಕೋಶಾಧಿಕಾರಿ ಎ. ದಾಮೋದರ್, ಕ್ರೀಡಾ ಕಾರ್ಯದರ್ಶಿ ಧನಂಜಯ ಬಾಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಸುಧಾಕರ ಸಾಲ್ಯಾನ್ ಸ್ವಾಗತಿಸಿದರು,
ಕೋಶಾಧಿಕಾರಿ ಎ.ದಾಮೋದರ ವಂದಿಸಿದರು. ಸತೀಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಗೆ ಕರೋಕೆ ಹಾಡುಗಳ ಸಂಗೀತಾ ಕಾರ್ಯಕ್ರಮ ನಡೆಯಿತು.
