
ಬಂಟ್ವಾಳ: ಇಲ್ಲಿನ ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ಅಭಿವೃದ್ದಿಗಾಗಿ ಶತಚಂಡಿಕ ಯಾಗ ಸೇವಾ ರೂಪದಲ್ಲಿ ದೊಡ್ಡ ರಂಗಪೂಜೆ ಉತ್ಸವ ಮಾ. 1 ಶನಿವಾರದಿಂದ ಮೊದಲ್ಗೊಂಡು ಮಾ.7ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.

ಪೊಳಲಿಯ ಸರ್ವಮಂಗಳ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ಮಾ.1 ಶನಿವಾರ ಬೆಳಿಗ್ಗೆ ಗಂಟೆ 8ರಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ. ಮಾ.2 ಆದಿತ್ಯವಾರ ಬೆಳಿಗ್ಗೆ ಗಂಟೆ 7.30 ರಿಂದ ಪಾರಾಯಣ, ನವಾಕ್ಷರೀ ಜಪ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಹೋಮ ಸಾಯಂಕಾಲ ಗಂಟೆ 3.30 ರಿಂದ ಶ್ರೀಚಕ್ರ ಪೂಜೆ, ಮಾ.3 ಸೋಮವಾರ ಬೆಳಿಗ್ಗೆ ಗಂಟೆ 7.30 ರಿಂದ ಪಾರಾಯಣ, ನವಾಕ್ಷರೀ ಜಪ, ನವಗ್ರಹ ಹೋಮ, ಮಾ.4 ಮಂಗಳವಾರ ಬೆಳಿಗ್ಗೆ ಗಂಟೆ 7.30 ರಿಂದ, ಕಾಳಿ ಸಹಸ್ರನಾಮ ಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ, ಸಾಯಂಕಾಲ ಗಂಟೆ 4 ರಿಂದ ಮಂಟಪ ಸಂಸ್ಕಾರ, ಪ್ರಾಸಾದ ಶುದ್ದಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ಅಗ್ನಿ ಜನನ ಸಂಸ್ಕಾರ, ಮಾ.5 ಬುಧವಾರ ಬೆಳಿಗ್ಗೆ ಗಂಟೆ 6 ರಿಂದ ಶತ ಚಂಡಿಕಾಯಾಗ ಆರಂಭ, 10.30 ಕ್ಕೆ ಹೋಮಪೂಜೆ, ಪೂರ್ಣಾಹುತಿ ಗಂಟೆ 12ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣಿ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಮಾ.6 ಗುರುವಾರ ದೊಡ್ಡ ರಂಗಪೂಜೆ ಉತ್ಸವ ನಡೆಯಲಿದ್ದು ಆ ದಿನ ಬೆಳಿಗ್ಗೆ ಗಂಟೆ 7.30ರಿಂದ ಗಣಪತಿಹೋಮ, ಕಲಶಪೂಜೆ, ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ಸಾಯಂಕಾಲ 6.30 ಕ್ಕೆ ಮಹಾಪೂಜೆ, 7.30 ಕ್ಕೆ ದೊಡ್ಡರಂಗಪೂಜೆ 8.30 ರಿಂದ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ, ಮಾ. 7 ಶುಕ್ರವಾರ ಬೆಳಿಗ್ಗೆ ಗಂಟೆ 7.30 ರಿಂದ ಕಲಶಪೂಜೆ, ಗಣಪತಿಹೋಮ, ಪ್ರಧಾನ ಹೋಮ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ ಎಂದರು.
ಶತಚಂಡಿಕಾಯಾಗದ ಪೂರ್ವಸಿದ್ಧತೆಯ ಬಗ್ಗೆ ಸಾವಿರ ಸೀಮೆಯ ಸಭೆಯನ್ನು ಫೆ. 2 ಹಾಗೂ ಫೆ. 11 ರಂದು ನಡೆಸಲಾಗಿದೆ. ಫೆ. 9ರಂದು ಸೀಮೆಗೆ ಸಂಬಂಧಪಟ್ಟ ಗ್ರಾಮದಲ್ಲಿ ಸಭೆ ನಡೆದಿದೆ. ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ 15 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಶತಚಂಡಿಕಾಯಾಗಕ್ಕೆ ಸುಮಾರು 25 ಸಾವಿರ ಜನ ಭಕ್ತಾದಿಗಳು ದೊಡ್ಡರಂಗಪೂಜೆಗೆ ಸುಮಾರು 25 ಸಾವಿರ ಜನ ಭಕ್ತಾದಿಗಳು ಬರುವ ನಿರೀಕ್ಷೆಯಿದ್ದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಚೆಂಡಿನಗದ್ದೆಯಲ್ಲಿ ಮಾಡಲಾಗುವುದು. ಹಾಗೂ ಶತಚಂಡಿಕಾಯಾಗಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ಶ್ರೀ ದೇವಳಕ್ಕೆ ಬರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಹೋಗಲು ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಲಾಗುವುದು, ಕಾರ್ಯಕ್ರಮ ಯಶಸ್ವಿಗಾಗಿ ಸಂಘ ಸಂಸ್ಥೆಗಳ ಸ್ವಯಂ ಸೇವಕರು ತಮ್ಮ ತಂಡದ ಹೆಸರನ್ನು ನೋಂದಾಯಿಸುತ್ತಿದ್ದಾರೆ ಎಂದು ರಾಜೇಶ್ ನಾಕ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಅರ್ಚಕರಾದ ಪದ್ಮನಾಭ ಭಟ್ ಪೊಳಲಿ, ಅನಂತ ಪದ್ಮನಾಭ ಭಟ್ ಪೊಳಲಿ ಉಪಸ್ಥಿತರಿದ್ದರು.
—
