
ಬಂಟ್ವಾಳ: ಸರ್ವಜ್ಞನ ತ್ರಿಪದಿಗಳು ಶಾಲೆ ಪರೀಕ್ಷೆಗಷ್ಟೇ ಅಲ್ಲ, ಜೀವನ ಪರೀಕ್ಷೆಗೂ ಸಹಕಾರಿ ಎಂದು ಪತ್ರಕರ್ತ ಸಂದೀಪ್ ಸಾಲ್ಯಾನ್ ಹೇಳಿದರು.
ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕವಿ ಸರ್ವಜ್ಞ ಜಯಂತಿ ಆಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಹದಿನಾರನೇ ಶತಮಾನದಲ್ಲಿ ಸರ್ವಜ್ಞ ಬರೆದ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿದ್ದು, ಅದು ಸಾರ್ವಕಾಲಿಕವಾಗಿದೆ. ಇದನ್ನು ಅಳವಡಿಸಿದವರ ಬದುಕು ಉತ್ಕೃಷ್ಟವಾಗುತ್ತದೆ ಎಂದು ಅವರು ಹೇಳಿ, ಸರ್ವಜ್ಞ ಮಹಾನ್ ಸಂತನಾದ ಬಗೆ ವಿವರಿಸಿದರು. ಸರ್ವಜ್ಞ ಜಯಂತಿ ಆಚರಣೆಯನ್ನು ಸರ್ವಜ್ಞ ಜಯಂತಿ ಆಚರಣಾ ಸಪ್ತಾಹದ ಮೂಲಕ ಶಾಲೆಗಳಲ್ಲಿ ಮಾಡಿದರೆ ಹೆಚ್ಚು ಅರ್ಥಪೂರ್ಣ ಆಗುತ್ತದೆ ಎಂದವರು ಸಲಹೆ ನೀಡಿದರು.


ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕಾರ್ಯಧ್ಯಕ್ಷ ನಾರಾಯಣ ಸಿ.ಪೆರ್ನೆ ವಹಿಸಿ ಶುಭ ಹಾರೈಸಿದರು.
ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳದ ಅಧ್ಯಕ್ಷೆ ನಳಿನಿ ಮಹಾಬಲ, ಯುವ ವೇದಿಕೆ ತಾಲೂಕು ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ, ವಿಜಯ ಪುರುಷೋತ್ತಮ, ತಾಲೂಕು ಕುಲಾಲ ಸುಧಾರಕ ಸಂಘದ ಕೋಶಾಧಿಕಾರಿ ಸೋಮನಾಥ ಸಾಲಿಯಾನ್ ಉಪಸ್ಥಿತರಿದ್ದರು. , ಚುನಾವಣೆ
ವಿಷಯ ನಿರ್ವಾಹಕ ಮಂಜುನಾಥ ಕೆ ಹೆಚ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮಣ್ ಕುಲಾಲ್ ಅಗ್ರಬೈಲು ವಂದಿಸಿದರು
Advertisement







