ಬಂಟ್ವಾಳ: ಶ್ರೀರಾಮ ಮತ್ತು ಶ್ರೀ ಕೃಷ್ಣ ದೇಶದ ಮಣ್ಣಿನ ಚಿಂತನೆಯನ್ನು ಕೊಟ್ಟವರು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಶ್ರೀ ಕೃಷ್ಣ ಮಂದಿರ ಅಮ್ಟೂರು ಇದರ 25ನೇ ವರ್ಷದ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೂ ಸಮಾಜ ಅಸಂಘಟಿತ ವಾಗಿದ್ದಾಗ ಈ ದೇಶಕ್ಕೆ ಮುಸಲ್ಮಾನರ ಆಕ್ರಮಣವಾಗಿತ್ತು. ಇದು ಶ್ರೀರಾಮ, ಶ್ರೀ ಕೃಷ್ಣರ ಭೂಮಿ ಹೊರತು ಇದು ಬೇರ್ಯಾರಿಗೂ ಸೇರಿದ್ದಲ್ಲ. ಈ ಬಗ್ಗೆ ಹಿಂದೂ ಸಮಾಜ ಜಾಗೃತವಾಗಿರಬೇಕು ಎಂದು ತಿಳಿಸಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಆಶೀರ್ವಚನ ನೀಡಿ 25 ವರ್ಷಗಳ ಹಿಂದೆ ಶ್ರೀ ಕೃಷ್ಣ ಮಂದಿರ ಮಂದಿರ ನಿರ್ಮಿಸುವ ಮೂಲಕ ಇಲ್ಲಿ ಧರ್ಮ ಬಿತ್ತುವ ಕೆಲಸ ಆಗಿದೆ ಎಂದರು. ಭಗವದ್ಗೀತೆಯನ್ನು ಅಳವಡಿಸಿಕೊಂಡು ಬೇರೆ ದೇಶಗಳು ಸದೃಢವಾಗಿದೆ. ಆದರೆ ಭಾರತ ಅಳವಡಿಸಿಕೊಳ್ಳದೆ ಇರುವುದರಿಂದ ಸದೃಡವಾಗಿಲ್ಲ. ಸ್ಮಾರ್ಟ್ ಸಿಟಿ ಮಂಗಳೂರು ಡ್ರಗ್ ಸಿಟಿಯಾಗುತ್ತಿದೆ. ಹಿಂದೂ ಸಮಾಜ ಸದೃಢವಾಗಬೇಕಾದರೆ ಜಾತಿಯಿಂದ ಹೊರ ಬಂದು ಹಿಂದೂ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ವಾಗ್ಮಿ ಹಾರಿಕಾ ಮಂಜುನಾಥ್ ಧಾರ್ಮಿಕ ಭಾಷಣ ಮಾಡಿದರು.
ಉದ್ಯಮಿಗಳಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಮಮತಾ ಶೆಟ್ಟಿ
ರವಿರಾಜ ಸಾಲೆತ್ತೂರು, ಮಹಾಬಲ ಕೊಟ್ಟಾರಿ, ಸತೀಶ್ ಆಳ್ವ ಇರಾಬಾಳಿಕೆ, ಆನಂದ ಆಳ್ವ ಗೋಳ್ತಮಜಲು, ನಿವೃತ್ತ ಸೈನಿಕ ಸೋಮಪ್ಪ ಪೂಜಾರಿ ಅಮ್ಟೂರು
ಡಾ. ಸ್ವಾಮಿ, ಶಂಕರನಾರಾಯಣ ಐತಾಳ್, ಲಕ್ಷ್ಮೀ ವಿ.ಪ್ರಭು, ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿಗಾರ್ ಕರಿಂಗಾಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು. ಮಂದಿರದ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಕೊಟ್ಟಾರಿ ಗೋಳ್ತಮಜಲು, ಸಂತೋಷ್ ಬೇಂಕ್ಯ ಕಾರ್ಯಕ್ರಮ ನಿರೂಪಿಸಿದರು.