
ಬಂಟ್ವಾಳ: ಜಿಲ್ಲೆಯ ಕಾರಣಿಕ ದೈವಸ್ಥಾನ ಸಜೀಪಮೂಡ ಗ್ರಾಮದ ಪಣೋಲಿಬೈಲಿನ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಈ ತಿಂಗಳ ನಾಲ್ಕು ದಿನ ಅಗೇಲು ಸೇವೆ ಇರುವುದಿಲ್ಲ.
ಮಾ.10 ಭಾನುವಾರ ಅಮಾವಾಸ್ಯೆಯ ಪ್ರಯುಕ್ತ ಅಗೇಲು ಸೇವೆ ಇರುವುದಿಲ್ಲ, ಅದೇ ರೀತಿ ಮಾ. 22, 24, 26 ರಂದು ಸಜೀಪ ಮಾಗಣೆ ಪಡ್ಡೆರಮಾಡ ಜಾತ್ರೆಯ” ಪ್ರಯುಕ್ತ ಕ್ಷೇತ್ರದಲ್ಲಿ ಆಗೇಲು ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

