ಬಂಟ್ವಾಳ: ರಾಜ್ಯ ಅರಣ್ಯ ಸಚಿವ ಈಶ್ವರ ಖಂಡೆ ಅವರು ಸೋಮವಾರ ರಾತ್ರಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ತನ್ನ ಇಂದಿನ ಸ್ಥಾನಮಾನಗಳಿಗೆ ಪೂಜಾರಿಯವರ ಮಾರ್ಗದರ್ಶನವೇ ಕಾರಣ ಎಂದು ಪೂಜಾರಿಯವರನ್ನು ಕೊಂಡಾಡಿದ ಈಶ್ವರ್ ಖಂಡ್ರೆಯವರು ಸಚಿವನಾದ ಬಳಿಕ ಇದೇ ಮೊದಲ ಭಾರಿಗೆ ಮಂಗಳೂರಿಗೆ ಬಂದಿದ್ದು ನಿಮ್ಮ ಆಶಿರ್ವಾದ ಪಡೆಯುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದರು. ಕಾಂಗ್ರೆಸ್ ನಾಯಕರನ್ನು ನೋಡಿ ಇದು ನನ್ನ ಕುಟುಂಬ ಎಂದು ನಗುಬೀರಿದ ಪೂಜಾರಿ ಉತ್ತಮ ಕೆಲಸ ಮಾಡುವಂತೆ ಆಶೀರ್ವದಿಸಿದರು. ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈಯವರ ಪರವಾಗಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಹೂಗುಚ್ಛ ನೀಡಿ ಬರಮಾಡಿಕೊಂಡರು. ಕಾಂಗ್ರೆಸ್ ನಾಯಕರಾದ ರಕ್ಷಿತ್ ಶಿವರಾಮಯ್ಯ, ವೆಂಕಪ್ಪ ಪೂಜಾರಿ, ಈಶ್ವರ್ ಖಂಡ್ರೆಯವರ ಪುತ್ರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement
Advertisement